ಪುಟ:ಹನುಮದ್ದ್ರಾಮಾಯಣಂ.djvu/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

146 ಹನುಮದ್ರಾಮಾಯಣ. ಬರೆ ಮಂದಿರದೊಳ್ ಪೂರ್ವ | ಸ್ಮರಣೆಯದಾಗಿ ಬಿಟ್ಟು ರಾಕ್ಷಸತನುವಂ || ಕರಮೊಪ್ಪುವ ವನದೊಳ್ ಭೂ | ಸುರನಾಗುತೆ ಮೆರೆದನಂದು ಮುನ್ನಿನ ಪರಿಯಿಂ || ೧೫೦ || ಸಲೆ ಕೋಪದೆ ರಾವಣನುಂ || ನಿಲಯಕೆ ನಡೆತಂದು ಮನದೊಳಾಲೋಚಿಸುತಂ || ಕಲಿವಿದ್ಯುಜ್ಜಿಹ್ವಮಹಾ || ಖಲನಂ ಕರೆದೆಂದನಾಗಳೇಕಾಂತದೊಳಂ | ೧೫೧ | ನರಪತಿಯಂದದ ಮಾಯಾ || ಶಿರಮಂ ನೀಂ ಗೆಯ್ದು ಭೂಮಿಜೆಯ ಮುಂಗುಡಿಯೊಳ್ || ಇರಿಸೆನೆ ಕೇಳ್ತಾ ಕ್ಷಣದೊಳ್ || ಪೊರಮಟ್ಟಿಳಂದನೊಂದು ತಾಣಕೆ ದನುಜಂ || ೧೫೨ | ಅತ್ತಲ್ ದನುಜೇಂದ್ರಂ ನಿಜ | ಚಿತ್ತದೊಳಂ ಚಿಂತಿಸುತ್ತುಮುಪವನದೆಡೆಗಂ || ಮತ್ತತೆಯಿಂದೆಯಂದು ರ | ಘೋತ್ತಮನರ್ಧಾಂಗಿಯೊಡನೆ ತಾನಿಂತೆಂದಂ || ೧೫೩ | ನರವಾನರರೆಂಬರನಾ || ನರಿದಟ್ಟಿದೆನೆನ್ನ ಸತ್ವ ಸಾಹಸದಿಂದಂ || ತರುಣೀಮಣಿ ನೀನೇತಕೆ | ನಿರಶನದಿಂದಿರ್ಪ್ಪೆ ಬಿಸುಡು ತದ್ವಾಂಛಯನುಂ || ೧೫೪ | ಇನ್ನಾದೊಡೆಯುಂ ಚಿತ್ತದೆ | ಖಿನ್ನತೆಯಂ ಬಿಟ್ಟು ಬಂದು ಮದ್ದೇಹದೊಳಂ || ಚೆನ್ನಾಗಿರ್ದ್ದಪುದೆಂದಂ || ಬನ್ನೆಗೆ ಮಾಯಾವಿ ಬಂದನಾರ್ಭಟಿಸುತ್ತಂ || ೧೫೫ !! ಒರೆಯುಗಿದ ರಕ್ತಖಡ್ಡದ || ಮಿರುಗುವ ಮಾಯಿಕದ ಮಸ್ತಕದ ರಕ್ಕಸನುಂ || ಭರದಿಂ ಬಂದುಂ ದನುಜೇ | ಶ್ವರನಿದಿರೊಳ್ಳಿ೦ದು ಗರ್ಜಿಸುತ್ತಿಂತೆಂದಂ | ೧೫೬ | ಇದು ರಾಮನ ತಲೆ ನೋಡಯ್ | ತ್ರಿದಶಾಂತಕ ನಿನ್ನ ಮುಂದು ನಿಲ್ವವನಾವೊಂ ||