ಸಪ್ತಮಾಶ್ಯಾಸ. 147 ಸದೆದೆಂ ಲಕ್ಷ್ಮಣರಘುಜರ || ನೊದೆದಟ್ಟಿದೆನಮಿತಕಪಿಗಳಂ ಕ್ಷಣಮಾತ್ರಂ | ೫೭ }. ಎನಲವನು ಮನ್ನಿಸಿ ಮೇ | ದಿನಿಯಣುಗಿಯ ಬಳಿಗೆ ತಲೆಯನಿಳಿಸೆಂದು ದಶಾ || ನನನಾತಗೆ ನೇಮಿಸೆ ತ || ದನುಜಂ ತಂದಿಟ್ಟನವಳ ಪೊರೆಯೊಳ್ ಶಿರಮುಂ || ೧೫೮ || ನೋಡಿದಳವನಿಜೆ ಶಿರಮಂ | ಕೇಡಾದುದೆ ನಿನ್ನ ನಾಮಕ ಕಟಾ ಧರೆಯೊಳ್ || ಬಾಡಿತೆ ರವಿವಂಶದ ಲತೆ | ಮೂಡಿತೆ ವೈಧವ್ಯ ಮೆನಗೆ ಹಾಹಾ ಎಂದಳ್ | ೧೫೯ | ದಶರಧಭೂಮಿಾಪಾಲನ | ಬಸಿರೊಳ್ ಸಂಜನಿಸಿ ಮೃತ್ಯು ಕೈಕೇಯಿಯಿಂದಂ || ಬಿಸುಟಯ್ದಿರಿಯಂ ನಿನಗೀ | ವಸುಮತಿಯೊಳಗಾಯ್ತಿ ಮರಣಮೆಲೆ ಮದ್ರಮಣಾ ||೧೬೦|| ಸತ್ಯಮೇ ಲೋಕತ್ರಯದೊಳ್ | ನಿತ್ಯಂ ತಾನೆಂದು ಬಂದು ದೈತ್ಯನ ಮುಖದೊಳ್ | ಮೃತ್ಯುವಶನಾಗುತೆನ್ನಂ | ಪ್ರತ್ಯೇಕ ಕ್ಷೇಶಕೂಪದೊಳಗಿಳಿಪಿದೆಯಾ || ೬೧ || ಎನ್ನತ್ತಣಿನಾದುದು ವನ | ದನ್ನಗೆ ಮೃತಿಯೆಂದು ಮರುಗಿ ನಾನಾವಿಧದುಃ || ಖೋನ್ನತಿಯಿಂ ಧರಣೀಸುತೆ || ತನ್ನಿದಿರಿನೊಳಿರ್ಪ ಪಂಚ್ಕಂನೊಳುಸಿರ್ದಳ | ೧೬೨ !! ಎಲವೊ ಖಲನೆ ಮತ್ತತಿಯಂ | ತಲೆಗುಯ್ದಂತೆನ್ನನಿಂದು ಹತಿಗೊಳಿಸೆನುತಂ | ಪಲವಗೆಯಿಂ ಪಂಬಲಿಸು | ತಳುತಿರೆ ಚರನೊರ್ವನಂದು ದನುಜನೊಳೆಂದಂ || ೧೬೩ | ಕಾರ್ಯನಿಮಿತ್ತದೆ ತವಸಚಿ || ವಾರ್ಯ೦ ಬಂದಿರ್ಪ್ಪಸಿಲ್ಲಿಗೆಂದೆನೆ ಭರದಿಂ || ಧೈರ್ಯoಗುಂದುತೆ ದಾನವ | ವರ್ಯ೦ ನಡೆತಂದನಾಲಯಕೆ ಚಿಂತಿಸುತಂ || ೧೬೪ |
ಪುಟ:ಹನುಮದ್ದ್ರಾಮಾಯಣಂ.djvu/೧೫೫
ಗೋಚರ