ವಿಷಯಕ್ಕೆ ಹೋಗು

ಪುಟ:ಹನುಮದ್ದ್ರಾಮಾಯಣಂ.djvu/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಷ್ಟಮಾಶ್ವಾಸ. 159 ತಂತಮಗೆ ಸೂರ್ಯಸುತಹನು | ಮಂತಾಂಗದಮುಖ್ಯರಂದು ವೃಕ್ಷಾದಿಗಳಂ || ಆಂತಾರ್ಬಟಿಸುತೆ ಲಂಕಾ | ಪಂಥಾನಮನೈದೆ ಬಂಧಿಸಿದರೆಣ್ಣೆ ಸೆಯೋಳ್ | ೭೫ | ರಾಘವಲಕ್ಷಣರುತ್ತರ | ಭಾಗದೊಳಂ ರಾವಣಾನುಜಾತಂಬೆರಸುಂ | ಬೇಗದೆ ಶರಚಾಪಾನ್ವಿತ | ರಾಗಿ ಮಹಾಪುರಮವೀಕ್ಷಿಸುತುಮಿರ್ದ್ದರಣಂ || ೭೬ || ಅಗಳು ಮುಚ್ಚಿದರಾಕ್ಷಣ || ಮಗಣಿತಗಿರಿತರುಗಳಿಂದೆ ವಾನರವೀರರ್ || ನೆಗೆದಾ ಕೋಂಟೆಯ ಬಂತಿಯ || ನಗುಳ‌ ಪುಲಿಮೊಗದ ಕೊತ್ತಳಂಗಳನಾಗಳ್ || ೭ || ಉರಿವೆಣ್ಣೆ ಮಣಲ ಸುಣ್ಣದ | ಪರವಿಗಳಂ ಕರಗಿಸಿರ್ದ್ದ ಸೀಸದ ರಸಮಂ || ಭರದಿಂ ಚೆಲ್ಲುವ ದೈತ್ಯರ | ನೆರವಿಯನುರುಮುಷ್ಟಿಯಿಂದ ತಿವಿತಿವಿದಿಟ್ಟರ್ || ೭೮ || ದ್ವಾರಗಳಂ ಮುರಿದುಂ ರಣ | ಶೂರರ್ಕಳ್ ಪೊಕ್ಕು ಸದೆದು ದೈತ್ಯಾವಳಿಯಂ || ಘೋರಾರ್ಭಟಿಗೆಯ್ಯುಂ ಪ್ರಾ| ಕಾರಗಳಂ ಕೆಡೆಪಿ ಕೊಂದರಡಪಾಯ್ಸಳಮಂ | ರ್೭ | ಎಲ್ಲೆಡೆಯೊಳ್ ಕಪಿವರ್ಗದ | ಗಲ್ಲಣೆ ಬಿರುಸಾಗೆ ಕೇಳು ರಾಕ್ಷಸನಾಥಂ ! ತಲ್ಲಣಿಸುತೆ ನಿಜಸೇನಾ | ವಲ್ಲಭರಂ ಬೇಗದಿಂದೆ ಫೋದಪುದೆಂದಂ \\೮೦ | ತುರಗಸ್ಯಂದನಕುಕ್ಕುರ | ಕರಿಖರಶಾರ್ದೂಲಕಾ ಸರೋಷ್ಟಾದಿಗಳಂ || ಭರದಿಂದೇದ್ದು ೯೦ ರಜನೀ | ಚರರಾರ್ಭಟಿಸುತ್ತ ಬಂದರತಿರೋಷದೊಳಂ | ೮೧ | ಘೋರಾಕಾರದ ರಾಕ್ಷಸ | ವೀರರ್ ಮುಂದಳೆದು ತೇಜಿತೇಶಾನೆಗಳಂ |