ಹನುಮದ್ರಾಮಾಯಣ. ಪತ್ನಕಂ ಬಂದು ಮುದಂ | ಬೆತ್ತಿರೆ ಕಿರಿದಾಯಿಯಗ್ರಜಾತಂ ನಡೆತಂ || ದುತ್ತ ಮನಿಜಪುಟಛೇದನ | ದತ್ತಂ ಕರೆದುಚ್ಚನೈದೆ ರಘುಜಾನುಜರಂ | ೬೭ !! ದೊರೆತನದ ಭಾರಮಂ ಭೂ | ವರನೀ ರಘುನಾಥಗೀಯಲುಜ್ಜುಗಿಸಲ್ಮಂ || ದರೆಯತ್ತಣಿಂದೆ ಕೈಕಾ | ತರುಣಿ ಮನೋನಾಥಗೆಂದಳದನೇವೇಳ್ತಂ | ೬೮ | ಭರತಗೆ ರಾಜ್ಯದ ಸಿರಿಯಂ | ಪಿರಿಯಕುಮಾರಗೆ ಚತುರ್ದಶಾಬ್ದಂ ವನಮಂ || ಕರುಣಿಪುದೆಂದಳ್ಳುನ್ನಂ | ವರಮಂ ತಾಂ ಕೇಳಿಕೊಂಡ ಸತ್ವದೆ ನೃಪನೊಳ್ | ೬೯ || ಆನುಡಿಗೇಳುತೆ ರಘುಜಂ | ಭೂನಾಥಂಗೆರಗಿ ಸೀತೆಸಹಿತಂ ಪೊರಟಂ | ಈ ನರನಾಥಂ ಪಿತಗೆ ಸ | ಮಾನಂ ತಾನೆಂದು ಭಕ್ತಿಯಿಂದಾಂ ಬಂದೆಂ || ೭೦ | ಪುರಮಂ ತಳರ್ದು ರಥದೊಳ್ | ಭರದಿಂದಂ ಬಂದು ಶೃಂಗಿಪೇರಪುರಕ್ಕಂ || ಮರಳಿಸಿ ಮಂತ್ರಿಸುಮಂತನ || ನಿರುಳಲ್ಲಿರೆ ಮಿತ್ರನಾದ ಗುಹನೆಳ್ತಂದಂ ಮುದದಿಂ ಗುಹನಿಂ ಗಂಗಾ | ನದಿಯಂ ಮಿಗೆ ದಾಂಟೆವರೆ ಭರದ್ವಾಜತವೋ | ನಿಧಿಯೆಡೆಗಂ ತನ್ನುನಿವರ || ನಧಿಕತರ ಪ್ರೇಮದಿಂದೆ ಮನ್ನಿಸಿದನಣಂ | ೨ | ಆ ಜತ್ತಿಯಿಂ ಬೀಳ್ಕೊಂಡು ವಿ | ರಾಜಿಪ ವಾಲ್ಮೀಕಿಮುನಿಪನೆಡೆಗಂ ಬರಲೀ || ರಾಜೇವಾಂಬಕನಂ ಸಲೆ | ಪೂಜಿಸಿ ಸತ್ಕರಿಸಿ ನುತಿಸಿ ತಾನಿಂತೆಂದಂ | A | ಜಾನಕಿಯರಸನೆ ನಿನ್ನಲ್ಲಿ | ಧಾನಮಹಾಮಹಿಮೆಯಿಂದೆ ಧನ್ಯನುಮಾಂ | \ ||
ಪುಟ:ಹನುಮದ್ದ್ರಾಮಾಯಣಂ.djvu/೧೮
ಗೋಚರ