ನವಮಾಶ್ವಾಸ. 175 ಒರೆಯಲ್ಲಾರ್ಗ್ಗಕ್ಕುಂ ದೇ । ವರೆ ಬಲ್ಲಿಂ ನೆನೆಯಲಸದಳಂ ತನಗೆಂದಂ 11 ೨೨ || ಎನೆ ರಘುಜಂ ನಸುನಗುತಂ | ಧನುವಂ ಪಿಡಿದೇಳಲೊಡನೆ ಲಕ್ಷ್ಮಣದೇವಂ !! ತನಗಪ್ಪಣೆಗುಡವೇಟೈಂ। ದನುನಯದಿಂ ಕೇಳ ನಂದು ದುರವೀಳಿಗೆಯಂ | ೨೩ || ಅನಿತರೊಳಸುರೇಂದ್ರನ ವಾ | ಹಿನಿ ವಾನರಚಯಮನೈದೆ ಘಾತಿಸುತಿರಲಂ || ದಿನಸುತನಾರ್ಬಟಿಸುತೆ ಕಡು ! ಗಿನಿಸಂ ರಾಕ್ಷಸರನದ್ರಿಯಿಂದಸಿಬಡಿದಂ | ೨೪ | ಈ ವಾನರನಾವೊಂ ತಾ | ನೇವೊಂ ನಿಜಧುರದೊಳಾನಲಾರ್ಪ್ಪನೆ ಎನುತುಂ !! ರಾವಣನುರುಕೊಪದೆ ಸು | ಗ್ರೀವನನೀಕ್ಷಿಸುತೆ ಗರ್ಜಿಸಿದನಾ ಕ್ಷಣದೊಳ್ | ೨೫ || ರಾವಣನೆಂಬಂ ನೀನೇ ! ನಾ ವಿಪಿನದೊಳಂದು ಕಳ್ಳನಂದದೆ ಸೀತಾ || ದೇವಿಯರಂ ಕಳು ಯ ಮ | ಹಾವೀರನೆ ಪೇಳೆನುತ್ತೆ ಪೊಡೆದಂ ರವಿಜಂ - {| ೨೬ || ಇವಗಳ್ಳುವನೇ ರಾವಣ | ನವಿಲಂಬದೆ ಶರಮನುಗಿದು ಬಿಡೆ ಪೇರ್ಪೊಡೆಗಂ || ರವಿಜಂ ತಚ್ಚರಘಾತದಿ | ನವನಿಯೊಳಂ ಮುಚ್ಚೆವೋಗೆ ಮಲಗಿದನಾಗಳ್ || ೨೩೭ | ಪತಿ ಬಿಳನೆಂದು ಮರ್ಕಟ | ತತಿಯಾರ್ಬಟಿಸುತ್ತೆ ದೈತ್ಯಬಲಮಂ ಕ್ಷಣದೊಳ್ || ಪತನಂಗೊಳಿಸುತ್ತಿರೆ ಕಂ | ಡತಿಶೌರ್ಯದಿನೆಚ್ಚನಸ್ತಗಳನಸುರೇಂದ್ರಂ 11 ೨೮ 11, ಉರುಬಾಣದ ಹತಿಯಿಂ ವಾ | ನರರಳವಳಿದೋಡುತಿರ್ಪ್ಪ ಸಮಯದೊಳಂ ಕೇ || ಸರಿಸುಕುಮಾರಂ ಬಂದುಂ | ಹರಿನಾದಂ ಗೆಯ್ಯುತೆಂದನಸುರೇಂದ್ರನೊಳಂ || ೨೯ ||
ಪುಟ:ಹನುಮದ್ದ್ರಾಮಾಯಣಂ.djvu/೧೮೩
ಗೋಚರ