198 ಹನುಮದ್ರಾಮಾಯಣ. ಬರೆವರೆ ಕಂಡಂ ಪಾವನ | ಚರಿತನನನಿಲಾತ್ಮಜಾತನಂ ರಾತ್ರಿಯೊಳಂ | ಹರಹರ ನೀನೇತರ್ಕಿ | ಧುರದೊಳ್ ಮೆಯ್ಕರೆದೆ ವೀರ ಶರಣಾಗೆಂದಂ | ೧೫ | ಸಲೆ ನಡೆತಂದಿರ್ವರ್ ಕಪಿ | ಬಲದೊಳ್ ವೇತಾಲಭೂತಶಾಕಿನಿಯರ ಸಂ | ಕುಲಮಂ ನೋಡುತ್ತಂ ಕ | ಇಲೆಯೊಳ್ ನೆರೆ ಕಂಡರಚ್ಚಭಲ್ಲಾಧಿಪನಂ || ೧೬ | ಶರಹತಿಯೋಳ್ ಬಾಯ್ತಿಡುತರೆ || ದೆರೆದಂಬಕದಿಂದಮಿರ್ದ್ದ ಋಕ್ಷೇಶ್ವರಗಂ || ದೆರಗಿ ವಿಭೀಷಣನವನಂ | ಕರೆದು ಮಾತಾಡಿಸುತ್ತು ವಿರ್ದ್ವಂ ಬಳಿಯೋಳ್ || ೧೭ || ಅರಿಗಳೆ ವಿಜಯವಾದುದು | ನರನಾಥಂ ಮುತ್ಸೆಗೊಂಡು ಮಲಗಿರ್ಪ್ಪo ವಾ || ನರರೆಲ್ಲರ್ ನೊಂದರ್ ಕಂ | ಡಿರೆ ನೀವೇನಿದಕೆ ತಕ್ಕ ಕಜಮನೆಂದಂ || ೧ಲೆ || ಲೇಸಂ ಪೇಳಯ್ ದನುಜಾ | ಧೀಶನೆ ಮಾರುತಿಯನೀಕ್ಷಿಸಿರ್ಪ್ಪೆಯ ರವಿ ವಾ | ರಾಶಿಯನೆಯ್ತಲ್ ಬಳಿಕಂ ! ಕೀಶಾನೀಕದೊಳಗೆಂದು ಜಾಂಬವನುಸಿರ್ದo || ೧೯ | ಮನುಜೇಶ್ವರರವಿಸುತರಂ | ನೆನೆಯದೆ ಪವಮಾನಪುತ್ರನಂ ಕೇಳ್ವುದಿದೇ || ನೆನುತೆ ವಿಭೀಷಣನೆಂದೊಡೆ | ವನಜಾಸನಸೂನು ಪೇಳ್ವನತಿವಿನಯದೊಳಂ { ೨೦ | ಅವನಾರೆಂದರಿದಿರ್ಪ್ಪಯ್ | ಶಿವನಂಶೀಭೂತನಬಿಳಚೀವಾಧಾರಂ | ವಿವರಿಸಲಕ್ಕುಮೆ ತುಣ | ನಿವಹಮನಿನ್ನೆಂದು ಜಾಂಬವಂತಂ ಪೇಳ್ತಂ | ೨೧ | ಎನಲನ್ನೆಗಮನಿಲಾತ್ಮಜ | ನನುವಿಂ ಮೆಯ್ಯೋರ್ದ್ದ ಜಾಂಬವಂತಗೆ ಮಣಿದುಂ |
ಪುಟ:ಹನುಮದ್ದ್ರಾಮಾಯಣಂ.djvu/೨೦೬
ಗೋಚರ