199 ದಶಮಾಶ್ವಾಸ. ತನಗೂಳಿಗಮೇಂ ನೇಮಿಸೆ | ಬಿನದದೊಳದನೆಸಸೆನೆಂದೊಡಜಸುತನುಸಿರ್ದo \\ ೨೨ | ಬಾರಮ್ ಪವನಜ ವಾನರ | ವಾರಮನುಳಿಯಿಸಿ ಧರಾಧಿಪನ ಕಾರ್ಯಮನುಂ | ಪೂರಯ್ಯುವೊಡಂ ನೀನೇ | ಕಾರಣನಾಗಿರ್ಪ್ಪೆಯೆಂಬುದಂ ನೆನೆನೆನೆದುಂ \ ೨೩ | ಸರಳಿಸು ಕಡಲಯಂ ಪಾ ! ಲ್ಗೊರೆಯಾಣ್ಮನ ತೀರದಲ್ಲಿ ನಿರುಪಮಶೋಭಾ | ಕರ ಚಂದ್ರದ್ರೋಣ ಮೆನಿ || ಫರು ಶೈಲಂ ತೋಪ್ಪುರ್ ದಲ್ಲಿ ಮೂಲಿಕೆಯಿರ್ಕ್ಕುಂ ! ೨೪ !! ವರಶಲ್ಯವಿಶಲ್ಯ ಕರಣಿ | ಯುರುತರಸಂಧಾನಕರಣಿಸಂಜೀವಿನಿಗಳ್ || ಪರಿಶೋಭಿಸಿ ನಾಲ್ಕುಂ ಬಗೆ | ಪರಮೌಷಧಮಿರ್ಪ್ಪುದಿಂದದಂ ತರವೆಳ್ಳುಂ | ೨೫ || ರವಿಯುದಯದ ಮುನ್ನಮೇ ತಂ ! ದಿವರಸು ಬರ್ಪ್ಪಂತು ಗೆಯ್ಕೆ ವೇಳೆಂದುಂ ಜಾಂ || ಬವನೆನೆ ಕೇಳುಂ ಭರದಿಂ || ಪವನಸುತಂ ನೆಗೆದನೈದೆ ಮಲಯಾಚಲಕಂ {{ ೨೬ | ಆ ಗಿರಿಯ ಶಿಖರದಿಂ ಮೇ || ಯೂಗಿ ಮಹಾಸತ್ವದಿಂದ ಮುಸಿರಂ ಬಲಿದುಂ | ರಾಘವನಂ ನೆನೆದುರ || ಭಾಗಕ್ಕಂ ಪಾರ್ದು ಗಗನಪದದೊಳ್ ನಡೆದಂ || ೨೭ || ಗರುಡನ ಗತಿಯಂ ಧಿಕ್ಕರಿ | ಪುರುಸತ್ತಮದೆನಿತೊ ಪವನಪುತ್ರಂಗೆನುತಂ || ಸುರನಿಕರಂ ಕೊಂಡಾಡು | ತಿರೆ ಪಾಯ್ಸಂ ಮೇರುಶೈಲನವಖಂಡಗಳಂ 1 ಅಲೆ || ನಲವಿಂ ಲವಣೇಕ್ಷ ಸುರಾ || ಜಲಧಿಗಳಂ ಪಾಯ್ತು ಸರ್ಪಿದಧಿಶರಧಿಗಳೊಳ್ || ಚಲಿಸುತೆ ತತ್ರ ದ್ವಿಪಂ || ಗಳನುಳಿದು, ಕೀರವನಧಿಯೆಡೆಯಂ ಸಾರ್ಧ್ವ೦ | ೨೯ !!
ಪುಟ:ಹನುಮದ್ದ್ರಾಮಾಯಣಂ.djvu/೨೦೭
ಗೋಚರ