ವಿಷಯಕ್ಕೆ ಹೋಗು

ಪುಟ:ಹನುಮದ್ದ್ರಾಮಾಯಣಂ.djvu/೨೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಶಮಾಶ್ವಾಸ. 205 ಭರದೊಳ್ ತಾನೆಂದೆನುತಂ | ಶರಮಂ ತೆಗೆದೆಚ್ಚನಸುರನಾರ್ಬಟಿಸುತ್ತಂ | ೭ | ಒತ್ತರಿಸಿ ಬರ್ಪ್ಪ ಶರಗಳ | ಮೊತ್ತಮನುರೆ ಕಡಿದು ದಿವ್ಯತೂಣೀರದೊಳಂ || ಮತ್ತೊಂದು ಶರಮನಾಯ್ತು ರ | ಘೋತ್ತಮನೆಚ್ಚವನ ಚಾಪಮಂ ಖಂಡಿಸಿದಂ {{ ೬೮ | ಮುಳಿಸಿಂ ಶೂಲಾಯುಧಮಂ ! ಸಲೆ ಬೇಗಂ ಕೊಂಡು ಗರ್ವದುದ್ರೇಕದೊಳಂ || ಖಳನೆಸೆಯಲ್ ಖಂಡಿಸಿದಂ ! ಜಲಜಾಕ್ಷಂ ನಿಮಿಷದಿಂದೆ ದಿವ್ಯಾಸ್ತದೊಳಂ || ೬೯ || ತೆಗೆತೆಗೆದುಂ ಶಸ್ತ್ರಂಗಳ | ನುಗಿದೊಗೆಯುತ್ತಿರ್ದ್ದನಸುರನತಿವೇಗದೊಳಂ || ರಘುಜಂ ಕಡುಗಿನಿಂ ಶಿಖಿ | ಬಗಮಂ ಪೂಣ್ನೆಚ್ಚು ಗರ್ಜಿಸಿದನಾಕ್ಷಣದೊಳ್ | ೭೦ 11 ಉರಿಮಳೆಗರೆವುತೆ ವಿಶಿಖಂ | ಸರಭಸಮಂ ಪೋಗಿ ಖರನ ತನುಜನ ಶಿರಮಂ | ಅರೆದಿಟ್ಟಂಭೋನಿಧಿಗಂ | ಭರದಿಂದಂ ಬಂದು ಪೊಕ್ಕುದಾ ಮಡಿಗೆಯಂ 11 ೭೧ || ಬಳಿಕೊಂದೆ ಬಾಣದಿಂ ಖಳ | ಬಲಮಂ ಸಂಹರಿಸಿ ಮೆರೆದೊಡಾ ರಘುವೀರಂ | ನಲವಿಂ ನಿರ್ಜರರುಂ ಪೂ | ವಳಗರೆದರ್ ದಾನವಾರಿ ಜಯ ಜಯ ಎಂದುಂ || ೭೨ || ಮಕರಾಕ್ಷಮುಖ್ಯಖಳನಾ | ಯಕರುಂ ಹತರಾಗೆ ವಾರ್ತೆಯಂ ಮಿಗೆ ಕೇಳುಂ || ಚಕಿತಾಂತಃಕರಣಂ ದಶ | ಮುಖನಿಂದ್ರಾರಾತಿಯೊಡನೆ ತಾನಿಂತೆಂದಂ | ೭& | ಧುರಕಂ ತರಾಸುರರೊಳ್ | ಮರಳವರಂ ಕಾಣ್ಣುದಿಲ್ಲಮಿನ್ನೆಗಮಾ ವಾ ! ನರಮನುಜರ್ಗಾದುದು ಸಂ | ಗರದೊಳ್ ಜಯಮಿದಕೆ ಯತ್ನಮೇನಂ ತಿಳಿದಮ್ | ೭೪ |