208 ಹನುಮದ್ರಾಮಾಯಣ. ಪಡೆವೆರಸು ಪೋಗು ಪವನಜ | ನೆಡೆಗೆಂದುಂ ಜಾಂಬವಂಗೆ ನೇಮಿಸಲವನು || ಗುಡುಗುಡಿಸುತ್ತಂ ಬರೆ ಕಂ | ಡಡಗಿದನಸುರೇಂದ್ರತನುಜನನಿಭೀತಿಯೋಳಂ || ೯೦ || ಹುತವಹನಂ ಭಜಿಸಿ ಮಹಾ | ರಧಶಸ್ತ್ರಾಸ್ತ್ರಗಳನ್ನೆದೆ ಪಡೆವೆನೆನುತ್ತಂ || ಪ್ರಥಿತನಿಕುಂಭಿಲೆಗಂ ಬಂ ! ದತಿಯಾಗಮನೆಸಗುತಿರ್ದ್ದನದನೇವೇಳ್ತಂ | ೯೧ || ಕಾವಲ್ಕಂ ಪಟುಭಟದನು | ಚಾವಳಿಯಂ ನಿಲಿಸಿ ಕುಂಡಮಂ ವಿರಚಿಸಿ ಮೇಣ್ | ಕಾವಳಗೋಳಿಯ ಮಾಂಸದೆ | ಪಾವಕಗಾಹುತಿಯನೀಯಲುದ್ಯೋಗಿಸಿದಂ || ೯೨ || ಗುರುಮತದಿಂದಧರಮಂ | ವಿರಚಿಸಿದಂ ದನುಜನಿಪ್ರಮಂತ್ರಗಳಿಂದಂ || ಅರುಣಜಲಾಜದಿನಾಮಿಷ | ಚರುವಿಂದಾಹುತಿಯನಿತ್ತನಾ ರಾವಣಜಂ | ೯೩ || ಅನಿತರೊಳಿತಲ್ ಬೊಮ್ಮನ | ತನುಜಂ ಗಮಿಸುತ್ತುಮಿರ್ಪ್ಪ ಸಮಯಂ ಮ್ಯಾನಾ | ನನನಂ ಜಲಪೂರಿತಲೋ | ಚನನಂ ಪವಮಾನಪುತ್ರನಂ ಕಂಡನಣಂ || ೯೪ || ಏನಿದು ಪವನಾತ್ಮಜ ದು | ಮಾನಂ ನಿನಗೆಂದು ಜಾಂಬವಂ ತಾಂ ಕೇಳಲ್ || ಭೂನಂದನೆಯಂ ರಾವಣ | ಸೂನು ವಿಘಾತಿಸಿದ ಕತೆಯನೊರೆದಂ ಹನುಮಂ || ೯೫ | ಮಗುಳ್ಳರ್ವ್ವರ್ ದುಗುಡದೊಳಂ | ರಘುವರನೆಡೆಗಂ ಸಗಾಢದಿಂದಳಂದುಂ || ಜಗತೀತನುಜೆಯ ವಾರ್ತಯ | ನಗಜಾರಮಣಂಗೆ ಬಿತ್ತರಿಸಿದರ್ ಭರದೊಳ್ ೯೬ || ಆ ಮಾತಂ ಕೇಳುತಂ | ರಾಮಂ ಮೂರ್ಚ್ಛಿತನುವಾಗಿ ಮಲಗಿದನಿಳೆಯೋಳ್ ||
ಪುಟ:ಹನುಮದ್ದ್ರಾಮಾಯಣಂ.djvu/೨೧೬
ಗೋಚರ