ವಿಷಯಕ್ಕೆ ಹೋಗು

ಪುಟ:ಹನುಮದ್ದ್ರಾಮಾಯಣಂ.djvu/೨೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

216 ಹನುಮದ್ರಾಮಾಯಣ. ಜಂಭೇಂದ್ರರ ಯುದ್ಧ ಮೊ ಮಿಗೆ | ಶಂಬರಮನ್ಮಥರ ರಣಮೊ ತಾರಕಗಿರಿಜಾ || ಡಿಂಭರ ವರಸಮರಮೊ ತಾ | ನೆಂಬೊಲ್ ಕಣ್ಣ ಸೆದುದಾಜೆಯದನೇವೇಳ್ತಂ || ೧೫೦ || ರಿಸಿಗಳಿಗೆ ಕೇಳು ಮೇಕಾ | ದಶಿಯಾರಬ್ಧಂ ದಿನತ್ರಯಂ ಪಗಲಿರುಳುಂ || ಅಸುರನೊಳಂ ಯುದ್ಧಂ ಸಮ | ನಿಸಿದುದು ಲಕ್ಷಣಗೆ ಪೇಳ್ವೆಡಗ್ಗಳಮಕ್ಕುಂ || ೧೫೧ || ಹನುಮವಿಭೀಷಣಜಾಂಬವ | ರನುವರಕಂ ನಿಂದು ಶೈಲತರುಗದೆಯಿಂದಂ || ದನುಜೇಶನ ತನುಜಾತನ | ಘನರಥಶತಾಶ್ವನಿಕರಮಂ ಸದೆಬಡಿದರ್ || ೧೫೨ || ವಿರಥಂ ತಾನಾದೊಡಮುಂ | ಧುರಕಂಜದೆ ವಿಮುಖನಾಗದಸುರಂ ಬಳಿಕಂ || ದುರುಶಕ್ತಿಯನುಗಿದುಂ ತಾ | ನಿರದೆಚ್ಚಂ ದೈತ್ಯರಾಜನನುಜನೊಳಾಗಳ್ | ೧೫೩ || ಕಂಡುಂ ಲಕ್ಷ್ಮಣನದನುಂ | ಖಂಡಿಸಿ ಮೇಣ್ಯಂದ್ಯವಿಶಿಖಮಂ ತೆಗೆದುಂ ಕೋ || ದಂಡಕ್ಕಂ ತುಡಿಸಲ್ ಬ್ರ | ಹ್ಯಾಂಡಂ ಬಿಗುರಾಂತುದಸುರರುಂ ಭಯಗೊಂಡರ್‌ | ೧೫೪ | ಭೂಮಿಜೆ ಹದಿಬದೆಯಾದೊಡೆ | ರಾಮಂ ಸೂತೃತಚರಿತ್ರನಾದೊಡೆ ತನಗಂ | ತಾಮರಸಪದದೊಳಂ ಸು | ಪ್ರೇಮಾನ್ವಿತಭಕ್ತಿಯಿರ್ದ್ದೂಡರಿವೆಂ ಖಳನಂ | ೧೫೫ | ಕೊಲಲಿಂ ಶರಮೆನುತೆಚೊಡೆ | ಸಲೆಬೇಗಂ ವಿಶಿಖಮುರಿಯನುಗುಳುತೆ ಬಂದುಂ || ಖಳಶಿರಮಂ ಖಂಡಿಸಿ ಬಾಂ | ದಳಕಿಟ್ಟುದು ಚಂದ್ರಸೂರ್ಯರುಮ್ಮಳಿಸಂ | ೧೫೬ || ಸಿಡಿಲಂತಾರ್ಬಟಿಸುತೆ ತಲೆ || ಪೊಡವಿಯೊಳಂ ಬಿಟ್ಟು ಕಪಿಗಳಂ ಘಾತಿಸೆ ಕಂ ||