ಪುಟ:ಹನುಮದ್ದ್ರಾಮಾಯಣಂ.djvu/೨೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾದಶಶ್ವಾಸ. 221 ಬಾನೆಡೆಯೊಳ್ ನಿಂದುಂ ದು | ಮ್ಯಾನದೊಳೀಕ್ಷಿಸಿದನೈದೆ ರಣಭೂತಗಳಂ. | ೨೨ | ಕಾಲನ ಬಾಣಸವನೆಯೂ | ಕಾಳಿಯ ಬಳಗಂಗಳಿರ್ಕೆಯೂ ಪ್ರಳಯದ ಕಾ || ಪಾಲಿಯ ರಣಭೂಮಿಯೊ ಎನೆ | ಪಾಲಿತವೇತಾಲಧರಣಿಯಂ ಕಂಡನವಂ || ೨೩ | ಕರಿಶಿರಗಳ ಭಾಂಡಗಳೊಳ್ || ಕರುಳಳನುರೆ ತಾಳಿಸಿದುದು ಬಸೆಯಿಂ ನೆರೆ ಚೆ | ಜ್ವರದಿಂ ನರಶಾಕಗಳಂ | ವಿರಚಿಸಿದುದು ಮೋದಗೂಡಿ ಶಾಕಿನಿನಿವಹಂ || ೨೪ !! ಕಿವಿಗಳೆ ಚಕ್ಕುಲಿ ಪಲ್ಲಳ | ನಿವಹಮೆ ಪುರಿಗಡಲೆ ನಾಲಗೆಯೆ ದೋಸೆ ಸುಮಾಂ | ಸವೆ ಬೋನಂ ಕೀಲಾಲಮೆ | ತವೆ ಪಾನಕವಾದುದೈದೆ ಭೂತಾವಳಿಗಂ | ೨೫ ! ಕರಿಕರ್ಣಪರ್ಣದೊಳುರಿ | ಸುರಿದಡಗಂ ತಿಂದು ತೇಗಿ ರಕ್ತಂಗುಡಿದುಂ || ಉರೆ ರಿಂಗಣಗುಣಿದುಂ ಕ | ಝರೆಗುಟ್ಟುತ್ತಿರ್ದ್ದುದಂದು ಮರುಳಳ ಬಳಗಂ || ೨೬ !! ನರಯಂತ್ರದ ತಂಬೂರಿಯ | ನುರುಕರಿಕರದಂಗವಾಜಿಖುರತಾಳಗಳಂ || ವರಗಜಕುಂಭಸ್ಥಳದಿಂ | ಮುರಜಗಳಂ ಸಮೆದು ನಚ್ಚಣಂಗೆಯು ದಣಂ | ೨೭ | ನರಿನಾಯಿಪರ್ದುಕಾಗೆಯ | ನೆರವಿಗಳಿಂ ಬೊಮ್ಮರಕ್ಕಸರಿನತಿಭೀತಿಂ || ಕರಮಾದ ರಣಮವೀಕ್ಷಿಸಿ | ಚರನೊಡೆಯನ ಪೊರೆಗೆ ಬಂದು ಪೇಳ್ಂ ಕತೆಯಂ || ೨೮ | ಅನುಚರನಾಡಿದ ನುಡಿಯಂ | ದನುಜೇಂದ್ರಂ ಕೇಳು ಕೋಪದಿಂದಾ ಕ್ಷಣದೊಳ್ | ಅನುವರಕೆಳಂದಂ ಸ್ಯಂ | ದನಮಂ ತಾನೇರ್ದ್ದು ದೈತ್ಯವಾಹಿನಿವೆರಸುಂ | ೨೯ || 29