240 ಹನುಮದ್ರಾಮಾಯಣ. ಹನುಮಂತನ ಬೆನರ್ವನಿಯುಂ || ವನನಿಧಿಯೋಳ್ ಪತಿತಮಾಗೆ ಸೆಲ್ಮನ್ ನುಂಗಲ್ | ಘನಗರ್ಭo ಬಳೆಯುತ್ತಿರೆ | ಯನಿತರೊಳಂ ಸೂತವೈದೆ ಝಷೆಯಂ ಪಿಡಿದಂ | ೬೦ || ವೈಸಾರಿಣಿಯಂ ವ್ಯಾಧಂ | ನೈಶಾಚರಪತಿಗೆ ತಂದುಕೊಡಲಾ ಕ್ಷಣದೊಳ್ || ಮೆಯ್ತಾಳಲ್ಕಾನಿರ್ದೆo | ಶೈಶವರೂಪದೊಳೆ ಅದರ ಜಠರಾಂತರದೊಳ್ || ೬೧ || ಈಕ್ಷಿಸುತಂ ಮೈರಾವಣ | ರಾಕ್ಷಸಪತಿ ತೋಷದಿಂದಮನುದಿನವೆನ್ನಂ || ರಕ್ಷಿಸಿ ನಗರದ್ವಾರದೆ | ರಕ್ಷಕನಾಗಿಪ್ಪುದೆಂದು ನೇಮಮನಿತ್ಯಂ || ೬೨ || ಅಂದುಮೊದಲ್ ನಾನೀ ಅರ | ವಿಂದದ ನಾಳಮನೆ ಕಾವ ಕಾರ್ಯದೊಳಿರೆ ಸಂ || ಕ್ರಂದನಮುಖರ್ ಬೆದರ್ದಪ || ರಿಂದಿಲ್ಲಿಗೆ ಬಂದು ಬದುಕಿ ಪೋಪುದುಮುಂಟೆ || ೬೩ || ಇಂತೆನೆ ಪವನಜನತಿಶಯ | ಸಂತೋಷದೆ ಹನುಮನೆಂಬವಂ ತಾನೆ ಕಣಾ || ನೀಂ ತಿಳಿಯದಾದೆ ಬಿಡು ಬಿಡು | ಪಂಥಾನಮನಸುರಪತಿಯನಗರಕ್ಕಿಂದಂ | ೬೪ || ಆತಂ ಭುವನಖ್ಯಾತಂ || ಪಾತಾಳಾಕಾಶವಿಸ್ಕೃತಂ ಹನುಮಂತಂ | ಭೂತೇಶಾಕಾರಂ ಬಿಡು ಬಿಡು || ಮಾತಿನ ಬನ್ನಣೆಯನೆಂದನನಿಲನ ಪೌತ್ರಂ {{ ೬೫ | ನಸುನಗುತಂ ಹನುಮಂತಂ || ಪ್ರಸರಿಸಿದಂ ತನುವನಂತಕಾಲದ ಹರನೋಲ್ | ಶಶಿಸೂರ್ಯಗ್ರಹತಾರಾ | ವಿಸರಾಂಕದೊಳೆಸೆಯೆ ಕಂಡನಾ ಸುಕುಮಾರಂ | ೬೬ | ಬೆದರುತೆ ಬಂದು ತಂದೆಯ | ಪದಪದ್ಮಕೆಮಣಿದು ನಿಂದು ಸದ್ಭಕ್ತಿಯೋಳಂ ||
ಪುಟ:ಹನುಮದ್ದ್ರಾಮಾಯಣಂ.djvu/೨೪೮
ಗೋಚರ