ಪುಟ:ಹನುಮದ್ದ್ರಾಮಾಯಣಂ.djvu/೨೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಾದಶಾಶ್ವಾಸ. 241 ತ್ರಿದಶಾರ್ಚಿತ ವೇದಾತ್ಮಕ | ಸದಮಲ ಜಯಜಯತು ಎಂದೊಡೆಂದಂ ಹನುಮಂ || ೬೭ || ತನುಜನೆ ಕೇಳಯ್ ವಂಚಿಸಿ | ದನುಜಂ ರಾಘವರಸಿಲ್ಲಿಗಂ ತಂದಿಪ್ಪFo || ಹನನಂಗೊಳಿಸುತೆ ದೈತ್ಯನ | ನನುವಿಂ ಕೊಂಡುಯ್ಕೆ ವೇಳ್ಳುಮಾ ಭೂಮಿಪರಂ || ೬೮ || ತಿಳಿಯದು ಬಟ್ಟೆಯದೆನಗಿ | ನ್ನೊಳುಗುವೊಡೆ ಯತ್ನಮೇನೊ ಅಸುರನ ಚಾತು | ರ್ಬಲಮೆನಿತಿರ್ಕ್ಕುಮೊ ಮಾಜದೆ | ತಿಳಿಪೆನೆ ಪೇಳ್ತಂ ಭಯಾವಹಂ ಪುರದಿರಮಂ || ೬೯ || ಪುಗುವೊಡಸಾಧ್ಯಂ ದನುಜನ || ನಗರಮನಾ ಕೊಂಟೆಸುತ್ತಿನೊಳಗಿರ್ದ್ದಪರಮ್ || ವಿಗಡರ್‌ ಕಾಲನ ಭಟರಂ | ವಿಗೆ ಲೆಕ್ಕಿಸದತುಳದೈತ್ಯರೆಲ್ಲಂ ಕಡೆಯೋಳ್ || ೭೦ || ದ್ವಾರದೊಳೊಂದಿರ್ದ್ದಪುದು ಸ | ರೋರುಹಭವನಿತ್ತ ತುಲೆಯದರೊಳಂ ನಿತ್ಯಂ || ಆರಯ್ಯುಂ ತೂಗುವರಾ | ಪೌರಭಟರ್ ಫೋಗಿವರ್ಪ್ಪ ನಾಗರಒನರಂ || ೭೧ || ಪೊಸಬರ್ ಬರೆ ತುಲೆಯುಂ ಕಂ ! ಪಿಸಲೊಡಮದನರಿದು ದೈತೃಭಟರವರಂ ಘಾ || ತಿಸುವರ್‌ ತನ್ನ ಗರಮನೀ || ಕ್ಷಿಸುವೊಡೆ ಭಯಗೊಳ್ಳರಮರಮನುಜೋರಗರುಂ | ೨ | ದನುಜನ ಸೋದರಿಯೋರ್ವಳ್ | ಮನೆದೇವತೆಯಂ ಸರಾಗದಿಂ ಪೂಜಿಸಲೆಂ || ದನುರಾತ್ರಿಯೊಳೆಯ್ಯರ್ಪ್ಪಳ್ | ಮಿನುಗುತೆ ಪುರಮಧ್ಯಮಿರ್ಸ್ಸ ದೇವೀಗೃಹಕಂ | ೭೩ || ಆ ದೇವಗೃಹದೊಳಂ ನ್ಯ | ಗೋಧಕುಜಂ ರಮ್ಯಮಾಗೆ ಶೋಭಿಸುತಿರ್ಕ್ಕುo | ಸಾದರದಿಂ ಮರನೇರಿರೆ || ಯಾ ದೈತ್ಯನ ತಂಗೆಯಿಂದ ಕಾರ್ಯ ಸಾಧ್ಯಂ ||೭೪||