ಪುಟ:ಹನುಮದ್ದ್ರಾಮಾಯಣಂ.djvu/೨೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

256 ಹನುಮದ್ರಾಮಾಯಣ. ದಿನಿಪುಷ್ಕರಕಕುಭಗಳೆ | ಇನಿತುಂ ತಾಂ ತೋರದಾದುವಾ ಸಮಯದೊಳಂ || ೫೨ | ಒತ್ತರಿಸುತೆ ಕವಿಯಲ್ ಮನು | ಜೋತ್ತಮನತಿ ಕೋಪದಿಂದೆ ಪವನಾಶುಗಮಂ || ಬತ್ತಳಿಕೆಯಿಂದಮುಗಿಯಲ್ | ಬಿತ್ತರದಿಂ ಬೀಸಿದತ್ತು ಜಂಝಾನಿಲನೊಲ್ | ೫೩ | ಅಂಬಂ ತಿರುವಿಗೆ ತುಡಿಸುತೆ | ಕುಂಭಿನಿಯಧಿನಾಧನೆಚೂಡಾ ಶರಮಾಗ || ಆಂಬುದಶರಮಂ ಕಡಿದುಂ || ಮುಂಬರಿದುಂ ತಿರುಗಿಸಿತ್ತು ಖಳನುರುರಧಮಂ | ೫೪ || ಡೆಂಡಣಿಸುತೆ ದಶಕಂಠಂ | ದಂಡಧರಾಶುಗಮನುಗಿದು ಬಿಲ್ಲೋಳಿಸುತೆ ಮುಂ | ಕೊಂಡೆಚ್ಚಾದ್ದ ೯೦ ನಿಜದೋ | ರ್ದಂಡಗಳಂ ಮೆಲಕೆತ್ತಿ ಸತ್ತರದಿಂದ || ೫೫ || ಆಟವಿಕನೆಚ್ಚ ಶರಮುಂ | ಕೋಟಿ ಕೃತಾಂತಾಭರೂಪದಿಂದೆಯ್ತಂದುಂ || ಸೂಟಿಯೋಳಂ ಕವಿಯಲ್ಬಂ ! ಘಾಟಕಮಾಹೇಶಶರಮನುಗಿದಂ ರಾಮಂ ೫೬ | ಚಂಡಪರಾಕ್ರಮದಿಂ ಕೋ | ದಂಡಕ್ಕಂ ತುಡಿಸಿ ವೇಗದಿಂದಟ್ಗೊಡಮುಂ || ಖಂಡಿಸಿ ದೈತ್ಯನ ಮಕುಟದ || ತಂಡಮನರೆಗಳಿಗೆಯಲ್ಲಿ ಬಂದುದು ಪೊರೆಗಂ || ೫೭ || ಪೂತುರೆ ತುಳಿಲಾಳಪ್ಪದು | ತೋಮರಕಾಂತು ನಿಂದು ಬದುಕಿದೊಡೆ ಪುನ || ರ್ಜಾತಂ ನೀನಪ್ಪೆಯೆನುತೆ || ಕಾತಿಯೊಳಸುರಂ ತಮಿಸಬಾಣಮನೆಚ್ಚಂ {{ ೫ಲೆ || ಮಾರ್ಗಣಮೆಳರೆ ಜಗಮಂ | ಕಾರ್ಗಳಲೆ ಕವಿದುದಮಮ ರವಿಯೇನಾದಂ || ಭಾರ್ಗವನಂತೇವಾಸಿಯ | ನಾರ್ಗಲ್ವರೆನುತ್ತ ಮಳ್ಳಿತಮರಾನೀಕಂ | ೫೯ ||