ಪುಟ:ಹನುಮದ್ದ್ರಾಮಾಯಣಂ.djvu/೨೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತ್ರಯೋದಶಾಶ್ವಾಸ. 251 ತುಡು ಸೌರಾಶುಗಮಂ ಜಗ ! ದೊಡೆಯನೆ ತಾಮಸಮಿದೇಕೆ ನಿರ್ಜರನಿಚಯಂ || ಸೆಡೆದುದೆನುತ್ತಂ ಮಾತಳಿ | ನುಡಿಯಲ್ಕಂ ರಘುಜನೆಚ್ಚನರ್ಯಮಶರಮಂ || ೬೦ | ಕಿರಣಗಳಂ ಪಸರಿಸುತಿಡಿ | ದಿರುವ ಮಹಾಧ್ವಾಂತನಿಚಯಮಂ ನುಂಗಿ ನಿಶಾ || ಚರಪತಿಯಂಗಮನುಚ್ಚ || ಲ್ಕರಣಂಗಳ್ ಕದಡೆ ಮುಟ್ಟೆ ಯಾಂತೆಕ್ಟರ್ತಂ || ೬೧ || ಜಾಣಾಯ್ದ ನಿರ್ಸೆ ಗುಣಕಂ | ಕೇಣಮೆ ನೀನೆನ್ನೊಳಿಂದು ಸಮಸತ್ಯದೊಳಂ || ಹಣಾಹಾಣಿಯನೆಸಗಿದೆ | ಬಾಣಮಿದೊಂದಿದೆಕೊ ತಾಳಿಕೊಳೆ ತಾಂ ಕಾಂ || ೬೨ | ಎಂದಾಸುರಶರಮಂ ದಶ | ಕಂಧರನೆಟ್ನಾಡೆ ಕೊಟಿಸಿಡಿಲುಬ್ಬಟೆಯೊಳ್ || ಬಂದುದು ಸಿಂಹಚಮೂರಕ | ಸಿಂಧುರ ಕಿಟಿಶರಭರೂಪಗಳನಾಂತಾಗಳ್ | ೬೩ || ಕವಿಕವಿದೆಳಕೆ ವಾನರ | ನಿವಹಂ ಕಾಗೆಯೆ ಬೆರ್ಜ್ಜೆ ಸುರಪತಿಸೂತಂ || ದಿವಿಜರ್ ಕಂಗಿಡೆಯಾ ರಾ || ಘವನರಿದುಂ ವೈಷ್ಣ ವಾಸ್ತಮಂ ತೆಗೆದೆಚ್ಚಂ 11 ೬೪ | ಪೊಂಗರಿಗದಿರಿಂ ಪಳಿದು ಪ || ತಂಗನ ಕಿರಣಗಳನೈದೆ ಸತ್ವರದಿಂದಂ | ನುಂಗುತ್ತಸುರನ ಮಾಯೆಯ | ಜಂಗುಳಿಯಂ ಮಗುಳೆ ಬಂದು ಸಾರ್ದ್ದುದು ದೊಣೆಯಂ ||೬೫ || ಅಚ್ಚರಿವಟ್ಟ ಸುರೇಂದ್ರ | ಚೆಚ್ಚರದಿಂ ಚಾಪದಶಕದೊಳ್ಳಿಶಿಖಗಳಂ || ನಿಚ್ಚಟಮುಂ ತುಡಿಸುತೆ ತಾ | ನೆಚ್ಚಂ ಘನಮಂಬುವೃಷ್ಟಿಯಂ ಸುರಿದ ವೊಲುಂ | ೬೯ | ಅದಕಂಜುವನೇಂ ರಾಘವ | ನುದಿತಕ್ರೋಧಾಗ್ನಿಯಿಂದೆ ಬಾಣಾವಳಿಯಂ |