ವಿಷಯಕ್ಕೆ ಹೋಗು

ಪುಟ:ಹನುಮದ್ದ್ರಾಮಾಯಣಂ.djvu/೨೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತ್ರಯೋದಶಾಶ್ವಾಸ. 261 ನಡುಗಿದರಮರರ್ ದೈತ್ಯರ | ಪಡೆ ಬೆರ್ಚ್ಚಿತು ಕುದಿದುದಬ್ಬಿ ಭುವನಾನೀಕಂ | ಸೆಡೆದುದು ಗಿರಿಗಳ್ ಸಿಡಿದುವು | ಪೆಡೆಯಂ ತಗ್ಗಿಸಿದನಹಿಪನದನೇವೇಳ್ತಂ {{ ೯೦ | ಬೆಂದು ಭುವನತ್ರಯಮೆಂ | ಬಂದದೊಳಂ ಕಿಡಿಯನುಗುಳುತಂ ವೇಗದೊಳಂ || ಬಂದೆರಗಿತು ಸಿಡಿಲೋಲ್ ದಶ | ಕಂಧರನುರುಹೃದಯದೇಶದೊಳ್ ದಿವ್ಯಾಸಂ || <೧ || ಭೇದಿಸಿ ಸೇರುರಮಂ ಬಳಿ | ಕಾದರದಿಂ ಮರಳು ಬಂದು ಸೇರ್ದುದು ದೊಣೆಯಂ || ಆ ದನುಜೇಶನ ದೇಹಂ | ಭೂಧರಮುಡಿವಂತೆ ಬಿಳುದಾ ರಣಧರೆಯೊಳ್ || ೯೨ || ಆತನ ಜೀವಂ ಭರದೊಳ್ || ಜ್ಯೋತಿರ್ಮಯಮಾಗೆ ಬಂದು ಧರಣೀತನುಜಾ | ನೇತನೊಳಂ ಬೆರೆದುದು ಸುರ | ಜಾತಂ ಕಡುವೆರಗುವಟ್ಟು ನೋಡಿದರದನುಂ | ೯೩ || ರವಿಜೈ ವಾತೃಕಸಂಗಮ | ದಿವಸದ ಸಾಯಾಹ್ನದಲ್ಲಿ ರಾವಣನಳಿಯ || ಲ್ಯವನೀಭಾರಂ ಪರಿದುದು || ಭುವನಾವಳಿಗಾಯ್ತು ಸೌಖ್ಯಮದನೇವೇಳ್ತಂ 11 ೯೪ {| ದುಂದುಭಿಯಂ ಮೊಳಗಿಸಿ ಸುರ | ವೃಂದಂ ಚೆಲ್ಲಿದುದು ದಿವ್ಯ ಪುಷ್ಪಾವಳಿಯಂ || ಬಂಧುರದಾರತಿಗಳನೊಲ | ವಿಂದಂ ಸುಳಿಸಿದರಮರ್ತ್ಯನಾರಿಯರಾಗ || ೯೫ || ಅರುಣಾನ್ವಿತನೇತ್ರದ ಸುರು | ಚಿರವರಕೋದಂಡಕಾಂಡಯುತಕರಯುಗದಾ | ತರುಣಾರ್ಯಮಭಾಸುರಬಂ | ಧುರದೇಹದರಾಮನೆಸೆದನಿಂದ್ರನ ರದಧದೊಳ್ 1 ೯೬ || ಜಯಜಯ ಜಗದಾರಾಧ್ಯಾ ! ಜಯಜಯ ಜಿತದೈತ್ಯಸಂಕುಲಾ ಮಾಲೋಲಾ || 34