265 ತ್ರಯೋದಶಾಶ್ಯಾಸ. ಈ ದನುಜೇಶ್ವರನಿಂದೆಮ | ಗಾದುದು ರಿಪುವಿಜಯಊಾತನಂ ಭರದಿಂ ಲಂ || ಕಾಧಿಪತಿತ್ವಕೆ ನಿಲಿಸೆಂ || ದಾದರದಿಂ ಲಕ್ಷಣಂಗೆ ರಾಘವನೆಂದಂ | || ಅp 11, ಕೇಳಯ್ಯ ವಿಭೀಷಣನೀ || ನಾಲಸ್ಯಂಗೆಯ್ಯದಿಂದು ಲಂಕಾಪುರಕಂ | ಪಾಲಕನಾಗುತ್ತುಂ ಪರಿ | ಪಾಲಿಸು ಕುಲಧರ್ಮಮೆಂಬ ಕಲ್ಪದ್ರುಮಮಂ i ೧೨೧ || ಧರಣಿಪನಿಂತೆನೆ ಲಕ್ಷ್ಮಣ | ನುರುವೇಗದೊಳಾ ವಿಭೀಷಣಂಬೆರಸುಂ ಸಾ || ಗರನಾಲ್ಕರ ಜಲಮಂ ವಾ | ನರರಿಂ ತರಿಸಿದನತೀವಸತ್ವರದಿಂದಂ | ೧೨೨ || ಪುರಮಂ ಸಿಂಗರಿಸುತೆ ವರ | ತರುಣಿಯರಿಂ ತರಿಸಿ ಮಂಗಲದ್ರವ್ಯಗಳಂ || ಸ್ಥಿರಗ್ರದೊಳೇರಿಸಿದಂ || ಹರಿಪೀಠಮನಾ ವಿಭೀಷಣಾಸುರಪತಿಯಂ | ೧೨೩ | ವಿಧ್ಯುಕ್ತಿಯೋಳಂ ದನುಜಾ | ರಾಧ್ಯಗೆ ಪಟ್ಟಾಭಿಷೇಕಮಂ ಮಾಡಿದರಾ | ವಿದ್ಯಾಧಿಕರುಂ ಮಂಗಲ | ವಾದ್ಯಂ ತೀವಿದುದು ಭುವನಭವನಾವಳಿಯಂ || ೧೨೪ | ಸರಮಾಭಾಮಿನಿವೆರಸುಂ || ಹರಿಪೀಠದೊಳೊಪ್ಪು ತಿರ್ಪ್ಪ ದನುಜಾಧಿಪಗಂ || ತರುಣಿಯರಾರತಿಯೆತ್ತಿದ || ರುರುಸಂಭ್ರಮವಾದುದಂದುಮದನೇವೇಳೋಂ || ೧೨೫ || ನಗರದ ಜನಮೆಳಂದೋಗು | ಮಿಗೆ ಕಾಣ್ಣೆಯನಿತ್ತು ರಾಜದರ್ಶನಗೆಯ್ದರ್ || ಪೊಗಳಲಾನಂದದೊಳಂ | ರಘುಪತಿಯಂ ನಾಕಲೋಕದಿವಿಜಾನೀಕಂ || ೧೨೬ || ತನಗಾದುದು ನಿಮ್ಮ ತಣಿ | ನನುಪಮಸೌಭಾಗ್ಯವೆಂದು ಲಕ್ಷ್ಮಣನಂ ಸ |
ಪುಟ:ಹನುಮದ್ದ್ರಾಮಾಯಣಂ.djvu/೨೭೩
ಗೋಚರ