261 ತ್ರಯೋದಶಾಶ್ವಾಸ ವಾನರಬಲವೆರಸುಂ ಬಂ || ದೀ ನಗರಮನೈದೆ ಮುತ್ತಿ ಘಟಕರ್ಣಘನ | ಧ್ಯಾನಾದ್ಯ ಸುರಾವಳಿಯಂ || ಕೀನಾಶನ ಪುರಕೆ ಕಳಿಸಿದಂ ರಘುವೀರಂ || ೧೩೫ || ಸುರಪಂ ಕಳಿಪಲ್ ರಧಮಂ | ಕರುಣದೊಳೆದ್ದು ೯೦ ಸರಾಗದಿಂ ದಶಶಿರನಂ || ಉರುತರಮಾರ್ಗಣದಿಂ ಸಂ | ಹರಿಸಿದನಾ ರಾಮನಮರತತಿ ಕೊಂಡಾಡಲ್ 1 ೧೩೬ || ನಿಲದವನನುಜ ವಿಭೀಷಣ | ಗೊಲಿವತೆ ಲಂಕಾಧಿಪತ್ಯ ಮಂ ಪಾಲಿಸುತಂ || ನಲವಿಂದೀ ವಿನರಮನುಂ 1 ತಿಳಿಸೆಂದುಂ ನಿಮ್ಮ ಫ್ರೆರೆಗೆ ಕಳಿಸಿದನೆನ್ನಂ { ೧೩೭ | ಲೋಕವಿದಾರಕನಳಿದಂ || ನಾಕನಿವಾಸಿಗಳ ಮಾದುದಾ ಮನದಿಷ್ಟಂ || ಕಾಕುತ್ಸಂಗಂ ಭವದಾ | ಲೋಕನದಭಿಲಾಷೆಯಾದುದೆಂದಂ ಹನುಮಂ || ೧೩ಲೆ | ಇಂತೆನೆ ಕೇಳ್ಳುಂ ಸೀತಾ | ಕಾಂತೆ ಮಹಾನಂದ ಬಾಷ್ಪಪೂರಿತಶುಭನೇ | ತಾಂತದೊಳೀಕ್ಷಿಸಿ ಕರುಣಾ | ಸ್ವಾಂತದಿನನಿಲಾತ್ಮಭವನೊಳೆಂದಳ್ ನಲವಿಂ || ೧೩೯ !! ನಿನ್ನತ್ತಣಿನಾದುದು ಪತಿ | ಗುನ್ನ ತಮಭ್ಯುದಯಮೆನಗೆ ಪೋದುದು ದುಃಖಂ || ಎನ್ನಂ ಪಡೆದಾ ಜನಕಂ || ಗನ್ನಿಂ ಮಿಗಿಲೆಂದು ಪೇಳು ಮೇಲಿಂತೆಂದಳ್ || ೧೪೦ || ನೀನೆ ಕಪಿರೂಪನಾಂತೀ | ಶಾನನಲಾ ತಿಳಿಯೆ ಸತ್ಯಸಾಹಸದಿರಮಂ || ಭೂನಾಥಗೆ ಗೆಲ್ವೆಣ್ಣಂ | ನೀನೇ ಸೆತ್ತಿತ್ತನೆಂದೊಡೇನತಿಶಯಮೇ || ೧೪೧ {. ಧರಣಿಪನ ಚಿತ್ತಕಂ ಬೇ || ಸರದಾಗದ ತೆರದೊಳರಿಸಿ ಶೀಘ್ರದೊಳೆನ್ನಂ || ೬ಣ
ಪುಟ:ಹನುಮದ್ದ್ರಾಮಾಯಣಂ.djvu/೨೭೫
ಗೋಚರ