ವಿಷಯಕ್ಕೆ ಹೋಗು

ಪುಟ:ಹನುಮದ್ದ್ರಾಮಾಯಣಂ.djvu/೨೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುರ್ದಶಾಶ್ಚಾಸ. 275 ನಲವಿಂದ ದಿನಕರಕುಲ | ತಿಲಕಂ ಭೂಸುತೆಯನೈದೆ ಮುದ್ದಿಡುತೆ ಧರಾ || ವಲಯದೆ ನಿನಗೆಣೆಯಪ್ಪಾ | ಲಲನೆಯರಂ ಕಾಣೆನೆಂದು ಪೊಗಳ್ಳಂ ಮುದದಿಂ ೪೫ || ವನದೊಳಗಂದೆನ್ನೊಳ್ ಸ ! ದ್ವಿನಯದೊಳಿಟ್ಟವನಿಸುತೆಯನಿಂದೊಪ್ಪಿಸಿದೆಂ || ದನುಜೇಶಂ ತಚ್ಛಾಯಾ || ವನಿತೆಯ ದೆಸೆಯಿಂದೆ ಮಡಿದನೆಂದಂ ಜ್ವಲನಂ | ೪೬ i ಇನ್ನೆವರಂ ಸುರತತಿಗಂ | ಜನ್ಮದೊಳಾಹುತಿಯನುಯೊಡಂಜುತುಮಿರ್ದೆo || ನಿನ್ನಿಂದಾದುದು ನಿರ್ಭಯ | ಮಿನ್ನೆನಗೆನುತಲನೈದೆ ನುತಿಸಿದನಾಗಳ || ೪೭ || ನಿಲದೆ ಸುರೇಂದ್ರಂ ತಾಂ ಬಂ || ದೊಲವಿಂ ಕಮ್ಮುಗಿದು ನಿಂದು ಸುತಿಸಿದನಾಗಳ್ || ಜಲರುಹಲೋಚನ ಸುಪ್ರ | ಜ್ವಲಿತಾರ್ಯಮಕೊಟಿಭಾಸ ಜಯಜಯ ಎನುತುಂ || ೪೮ | ಶಶಿರವಿಲೋಚನ ಶಾಶ್ವತ | ಶಶಲಾಂಛನಮೌಳಿವಿನುತ ಪಾಲಿತಮೌನಿ | ಪ್ರಸರಾಂಬುಜಭವವಂದ್ಯ | ಪ್ರಸವಾಸ್ಯತಿರಸ್ಕೃತಾಂಗ ಜಯಜಯ ಎಂದಂ | ೪೯ || ದರಹಸಿತಾನನ ನಂದಕ | ಧರ ಚಕ್ರಾಂಭೋಜಹಸ್ತ ದಿನಮಣಿವಂಶೋ || ದ್ದರಣ ಸುದಾರುಣ ದಶಕಂ | ಧರಹರ ನತಪಾರಿಜಾತ ಜಯಜಯ ಎಂದಂ | ೫೦ || ಅದ್ವಯಪದಾರ್ಥ ಕೃಪೆಯಿಂ | ಮದ್ವಚನಮನೈದೆ ಕೇಳು ದನುಜಾವಳಿಯಂ || ವಿಧ್ವಂಸನಗೆಯುಂ ವಿ || ಪ್ರಾಧ್ವರಮಂ ಕಾಯ್ತು ಪೊರೆದೆ ಸುರಸಂತತಿಯಂ || ೫೧ ! ಇಂತೆನುತಿಂದ್ರಂ ನುತಿಸಲ್ | ಕಂತುಹರಂ ಗೌರಿವೆರಸು ಬಂದುಂ ಸೀತಾ