28 ಹನುಮದ್ರಾಮಾಯಣ. ಆ ಸುಗ್ರೀವನ ದರ್ಶನ | ಊಾ ಶುಭದಿನದಲ್ಲಿ ದೊರೆಗೆಯೆಂದಂ ರಾಮಂ | ೪೫ | ರಘುವರನಿಂತೆನೆ ಪವನನ || ಮಗನತಿಭಯಭಕ್ತಿಯಿಂದಮಿರ್ವರನಾಗಳ್ || ಪೆಗಲಂ ಪತ್ತಿಸಿಕೊಂಡಾ | ನಗಮಂ ತಾನೇರ್ದು ಮರನ ನೆಳಲಂ ಸಾರ್ದಂ || ೪೬ | ಮೆಲ್ಲನೆ ಕುಳ್ಳಿರಿಸುತೆ ನವ | ಪಲ್ಲವಗಳನಾಯ್ತು ತಂದು ಪೀರಮನಿತ್ತುಂ || ಫುಲ್ಲಾಬ್ಬನಯನ ವಾನರ | ವಲ್ಲಭನಿರ್ದೆಡೆಗೆ ಮೋದಸೆಂ ಕರೆತರ್ಪೆಂ | ೪೭ | ನೀವಿಲ್ಲಿರ್ಪುದೆನುತೆ ಸು | ಗ್ರೀವನ ಸನ್ನಿಧಿಗೆ ಬಂದು ಕಯ್ಯುಗಿದೆಂದಂ || ಭೂವಲಯದ ಪೊರೆಯಿಳಿಪ | ಲ್ಯಾ ವಿಷ್ಣುವೆ ಮನುಜನಾಗಿ ಬಂದಿಹನರಸಾ || ೪೮ | ನೀನನುಮಾನ೦ಗೆಯ್ಯದೆ | ಭಾನುಕುಲೋದ್ದವರ ಬಳಿಗೆ ಬಂದವರಂ ಸ || ನ್ಮಾನಿಪುದೆಂದೆನೆ ಮಾರುತಿ | ತಾನಲಸದೆ ಬಳಿಗೆ ಬಂದು ಕಂಡಂ ರವಿಜಂ 11 ೪೯ | ದೇವ ನಿರಾಮಯ ನಿರ್ಮಲ | ಭಾವಜಪಿತ ಭಕ್ತ ಪೋಷ ಭಾಗ್ಯಪ್ರದ ರಾ || ಜೀವಭವಾರ್ಚಿತ ಭಯಹರ | ಪಾವನವಿಗ್ರಹನೆ ರಕ್ಷಿಸೆಂದೆಳ್ತಂದಂ | ೫೦ |! ಜಯ ಸುಶ್ಯಾಮಲಗಾತ್ರನೆ | ಜಯತು ಜವಾವಲಾನ್ವಿತನೆ ಶುಭಕರನೇ || ಜಯಜಯ ಸೀತಾರಮಣನೆ | ಜಯಜಯ ರಘುರಾಮನೆಂದು ಮಣಿದಂ ರವಿಜಂ || ೫೧ | ಚರಣಾಂಭೋರುಹಕರಗಿದ ! ತರಣಿಜನಂ ನೆಗೆಪಿ ತಳ್ಳವಿಸಿ ನೇಹದೊಳಂ | ಪೊರೆಯೋಳ್ಳುಳ್ಳಿರಿಸುತೆ ರಘು | ವರನಾತನ ಮೊಗಮನೀಕ್ಷಿಸುತ್ತಿಂತೆಂದಂ | ೫೦ |
ಪುಟ:ಹನುಮದ್ದ್ರಾಮಾಯಣಂ.djvu/೩೪
ಗೋಚರ