ದ್ವಿತೀಯಾಶ್ವಾಸ. 27 ಪಿತನಾಜ್ಞೆಯೋಳಂ ರಾಜ್ಯ | ಚ್ಯುತಿಯಾದುದು ಬಂದೆವೈದೆ ವಿಪಿನಾಂತರಕಂ || ಸತಿಯಂ ನೀಗಿದನರ್ಯಮ | ಸುತ ಕೇಳಾ ಬಟ್ಟೆವಿಡಿದು ಬರೆವರೆ ಬಳಿಕಂ || ೫೩ t ಇನಜನಿನಪ್ಪುದು ಕಜ್ಜಂ ! ಮನಗುಂದದೆ ಪೋಪುದಾತನೆಡೆಗೆಂದೆನುತಂ || ದನುಜ ಕಬಂಧಂ ಪೇಳ | ಅನುಜಾತಂಬೆರಸು ಬಂದೆನೀ ಗಿರಿತಟಕಂ 11 ೫೪ | ರವಿಸಂಭವ ನಿನ್ನ ನೋ | ಡುವುದೆಂತೆಂದೈದೆ ಯೋಚಿಸುತ್ತಿರ್ಪಾಗಳ್ || ಪವನಜನತ್ತಣಿನಾದುದು | ತವದರ್ಶನಮಿನ್ನುಮಪ್ಪದಂ ನೀಂ ಬಲ್ಲಮ್ || ೫೫ | ಇನಕುಲಭವರಾಂ ನೀನಾ | ತನಪುತ್ರಂ ನೋಳ್ಕೊಡದುವೆ ಕಾರಣದಿಂದಂ || ಅನುಜಾಗ್ರಜಸಂಬಂಧಂ | ಘನಮಿರ್ಕ್ಕು೦ ನಿನ್ನೊಳೆನ್ನೊಳವನೀತಳದೊಳ್ 11 ೫೬ || ಶ್ರೀರಾಮನೆಂದ ಮೃದುತರ | ಭಾರತಿಯಂ ಕೇಳು ಭಕ್ತಿಭಾವದೆ ರವಿಜಂ || ಮಿಾರೆಂ ದೇವರನುಜ್ಞೆಯ | ನಾರಯ್ಯಾಲಿಸುಗುಮೆನ್ನ ವಾಣಿಯನೆಂದಂ {{ ೫೭ | ಅಗ್ರಜವಾಲಿಯ ಭಯದೆ ಸ | ಮಗೈಶ್ವರ್ಯಮನದೆಲ್ಲಮಂ ಬಿಟ್ಟಿ ಶೈ || ಲಾಗ್ರದೊಳಾನಿರೆ ದೈತ್ಯದ || ಶಗ್ರೀವಂ ಭೂಮಿಸುತೆಯನುಯೀಯೆಡೆಯೊಳ್ | ೫೮ || ಶ್ರೀರಾಮರಾಮನೆನುತಂ | ನಾರೀಮಣಿ ಪಲುಬುತೈದೆ ಭೂಷಂಗಳನುಂ || ಸೀರೆಯ ಸೆರಗಿನೊಳಂ | ಕಟ್ಟಿ ರಸೆಗಂ ಬಿಸುಟು ಪೋದಳದನೇವೇಳ್ತಂ | ೫೯ || ಕುರುಪಂ ನೋಳ್ಳುದು ನೀವಾ | ತರುಣಿಯ ಭೂಷಣಮಿದೆಂದು ಮುಂದಿಡೆ ಸೀತಾ ||
ಪುಟ:ಹನುಮದ್ದ್ರಾಮಾಯಣಂ.djvu/೩೫
ಗೋಚರ