48 ಹನುಮದ್ರಾಮಾಯಣ. ಕಂದಗೆ ಧಾತಂ ಕೃಪೆಯಾ | ದಂದಮನೊರೆಯ ಕೇಳು ತಮ್ಮುನಿ ನುಡಿದಂ | ೨೨ | ಸಲೆಲೇಸಾದುದು ಕೃತಯುಗ | ದೊಳೆ ಮಾಲಿಸುಮಾಲಿಮಾಲ್ಯವಂತಾಖ್ಯಖಳ || ರ್ಜಲನಿಧಿಮಧ್ಯದ ನೆಲನೊಳ್ || ಪೊಳಲ೦ ಮಿಗೆ ಮಾಡಿಕೊಂಡು ಸೊಗಮೆಸೆದಿರ್ದ್ದರ್ \ ೨೩ || ಅಸುರರ್ಸುರರಂ ಬಾಧಿಸೆ | ಬಿಸಜಾಕ್ಷಂ ಕೊಂದೊಡುಳಿದರಿರ್ವದ್ರನುಜರ್ | ರಸೆಯೋಳ್ಳಿಲ್ಲದೆ ಭಯದು | ಬೃಸದಿಂ ಬಲಿಸಕೆಯ್ದೆ ಮರೆಗೊಂಡಿರ್ದ್ದರ್ || ೨೪ || ಆ ಪುರಮಿರ್ಪುದು ನಡೆಯೆನು | ತಾ ಪೌಲಸ್ಕಾ ಮುನಿಪನೆಂದೆನೆ ಲಂಕಾ | ದ್ವೀಪಕ್ಕಂ ಬಂದುಂ ವಿಗ | ತೋಪದ್ರವನಾಗಿ ಸೊಗದೊಳಿದ್ದ ೯೦ ಧನದಂ H ೨೫ | ವಿತಳದಿನೊಂದು ದಿನ ನಿಜ | ಸುತೆಸಹಿತೆ ಸುಮಾಲಿ ಭರದಿನೆಂದುಂ ಭೂ || ಪಥದೊಳ್ಳರೆ ಕಂಡಂ ಧನ | ಪತಿ ಲ೦ಕಾಪುರದೊಳಿರ್ಪ್ಪ ವಿಭವಮನಾಗಳ್ || ೨೬ || ಮುನಿಪತಿ ವಿಶ್ರವಸುಗೆ ನಿಜ | ತನುಜೆಯನಿಕ್ಕಿವಳಿನೆಮ್ಮ ಕುಲವೃದ್ಧಿಯನುಂ | ಟೆನಿಸುವೆನೆನುತ್ತುಮಾಲೋ | ಚನೆಗೆಯುಂ ಪೇಳ್ವನಂದು ಸುತೆ ಕೈಕಸೆಯೊಳ್ | ೨೭ || ಮೊಳೆದೋರುತ್ತಿದೆ ಜವ್ವನ | ಮಲಸದೆ ಪೌಲಸ್ಕೃಮುನಿಪನಂ ಸಾರ್ದು೦ ಮ || ತುಲಮಂ ಪೊರೆಯಲ್ಲೊರವನ | ಕೆಳೆಯಗೆ ಸಮರಪ್ಪ ಕುವರರಂ ಪಡೆಯೆಂದಂ || ೨೮ ಕಿ. ಪಿತನನುಮತಿಯಿಂದಂ ಮುನಿ | ಪತಿಯೆಡೆಗಂ ಬಂದು ನಿಂದು ನಸುನಾಣ್ಣುತಂ || ಕ್ಷಿತಿತಳಮನುಂಗುತಿದೆ ಬರೆ | ವುತೆ ಕಡೆಗಣ್ಣಿಂದೆ ನೋಳ್ಳಳಂ ಮುನಿ ಕಂಡಂ li ೨೯ |
ಪುಟ:ಹನುಮದ್ದ್ರಾಮಾಯಣಂ.djvu/೫೬
ಗೋಚರ