52 ಹನುಮದ್ರಾಮಾಯಣ. ನಿಧಿ ಕುದಿದುದು ಧರೆ ಕುಸಿದುದು | ಕುಧರಂಗಳ್ಳಿಡಿದುವವನ ಭೀಕರರವದಿಂ | ೫೨ } - ಉಡುಗಣಮುದಿರ್ದುದು ದಿವಿಜರ | ಗಡಣಂ ಮಿಗೆ ಭೀತಿಗೊಂಡುದಂಬುಜಪೀಠಂ || ನಡುಗಿದನಗರಾಟ್ಟಂಭವೆ || ಮೃಡನಂ ಬಿಗಿದಪ್ಪುಗೊಂಡಳದನೇವೇಳ್ತಂ | ೫8 | ಬಳಿಕಂ ಸಂಭವಿಸಿದನಾ || ಲಲನೆಯೋಳಂ ಕುಂಭಕರ್ಣನೆಂಬಸುರಂ ದಿ || ಗೃಳಯಕ್ಕಂತ್ಯಪ್ರಳಯಂ || ತಲೆದೋರ್ದ್ದುದೊಯೆಂಬೋಲಾಗೆ ಭೀಕರರಾವಂ || ೫೪ | ಅವರೆ ಜಯವಿಜಯರೆಂದೆ | ನ್ನು ವರಾ ಕೈಕಸೆಗೆ ಪುತ್ರರಾಗಲ್ಪಳಿಕಂ || ಜವನಂ ಪಡೆದವಳೊ ಜಗ | ದವಸಾದದ ಮೃತ್ಯುವೋ ಎನಲ್ಲುತೆಯಾದಳ | | ೫೫ | ಜನಿಸಲ್ಲೂರ್ಪನಖಾಭಿಧೆ | ಯನಂತರಂ ರಾಮಭಕ್ಕನಗಗಿರಿಕುಲಿಶಂ || ವನಧಿಗಭೀರಂ ಸಲೆ ಸ | ದ್ವಿನಯಂ ಗುಣನಿಧಿ ವಿಭೀಷಣಂ ಸುತನಾದಂ || ೫೬ || ದಶವದನಂ ಮಾತೆಗೆ ಮಣಿ || ದೊಸೆದು ನಿಲಲ್ಕಿಯಿಂದೆ ಮುದ್ದಿಸಿ ಭೂತೇ || ಶಸಖನೊಳಂ ನಿರ್ವೈರದೆ | ರಸೆಯಂ ಸೊಗಮಾಳ್ ಯೆಂದು ಪರಿಸಿದಳವನಂ || ೫೭ | ಅನುಜರನೊಡಗೊಂಡುಂ ಪಾ | ವನಮನೆ ಗೋಕರ್ಣಕ್ಕೆದೆ ಬಂದು ತಪಮಂ || ದನುಜಾಧಿಪನೆಸಗುತ್ತಿರೆ || ವನಜಾಸನನೊಲ್ಕು ಮಾತನೊಳ್ ಮೆಯ್ಯೋರ್ದ್ದ !! ಇಲೆ || ನಿನ್ನಯೆ ತಪಕಾಂ ಮೆಚ್ಚಿದೆ | ನೆನ್ನಂ ಬೇಡಿ ಕುಡುವೆನಣುಗನೆ ವರಮಂ | ನನ್ನಿಯಿದೆನಲಬ್ಬ ಜಗಂ | ಬಿನ್ನವಿಸಿದನಧಿಕಭಕ್ತಿಯಿಂ ದಶಕಂಠಂ | ೫೯ |
ಪುಟ:ಹನುಮದ್ದ್ರಾಮಾಯಣಂ.djvu/೬೦
ಗೋಚರ