ಪುಟ:ಹನುಮದ್ದ್ರಾಮಾಯಣಂ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

58 ಹನುಮದ್ರಾಮಾಯಣ. ನಿರತಂ ಸೊಗಮಿರ್ದ್ದಪೆನೆಂ ! ದಿರಲುದಯಂಗೆಯ್ದನಬ್ಬ ಬಾಂಧವನಾಗಳ್ ||೯೭|| ಸಂಧ್ಯಾಕೃತ್ಯ ಮನೆಸಗುತೆ | ಬಂದಂ ಸ್ಯಂದನಮನೇರ್ದು ರಾವಣದನುಜಂ || ಸಿಂಧುಪ್ರದೇಶಕಂ ನಲ || ವಿಂದಂ ಮಾರೀಚನಿರ್ಪ ಪರ್ಣಾಲಯಕಂ | ೯೮ | ಕಾಣುತಮಿದಿರ್ವಂದೆನ್ನ ! ಕಾಣಲೇಂ ಬಂದೆ ನಡೆವ ಕಜ್ಞಮದೇನಯ್ || ಮಾಣದೆ ವಿವರಿವುದೆಂದಾ || ಕೌಣಪಪತಿಯೊಡನೆ ಕೇಳ್ಳನಾ ಮಾರೀಚಂ | ೯೯ | ಮಾರೀಚನೆ ಕೇಳಶರಥ | ಭೂರಮಣನ ಪುತ್ರರಿರ್ವರೆಂದುಂ ಕಾಂ || ತಾರದೊಳೆಲೆವನೆಗೆಯು ಸು | ರಾರಿವಿರಾಧಾದಿದೈತ್ಯರಂ ಕೊಂದರಣಂ || ೧೦೦ || ತಂಗೆಯ ಕಿವಿಮೂಗುಗಳಂ | ಭಂಗಿಸಿ ಖರದೂಷಣಾದಿ ದನುಜಾವಳಿಯಂ || ಕೆಂಗರಿಗೋಲಿಂದಂ ರಘು | ಪುಂಗವನುರೆ ಸದದನಂತೆ ಕೇಳಯ್ ದನುಜಾ || ೧೦೧ || ಭಗಿನಿಯ ಸೊಬಗಂ ಕಿಡಿಸಿದ | ಪಗೆಯಹ ಮಾನವನ ಮಾನಿನಿಯನರಮನೆಯಂ | ಪುಗಿಸದಿರೆಂ ನೀಂ ಸಾಹಾ | ಯ್ಯಗಳಂ ನೆರೆವಾಳ್ಳುದೆಂದನಾ ದಶಕಂಠಂ || ೧೦೨ |! ಅಕಟಕಟ ಕಿಡಿಸಿ ಕಳೆವೆಯ | ಸಕಲೈಶ್ವರ್ಯಗಳನಿಂದು ಹರಿಯೋಳ್ಳಲಹಂ | ಸುಕರಂ ತಾನಪ್ಪದೆ ಮಾ | ಲಕುಮಿಯ ದಯೆ ನಿನಗೆ ಸಾಧ್ಯಮಪ್ಪುದೆ ನೋಡಲ್ !!೧೦a | ಮಾನವನೆಂದರಿಯದಿರಾ | ಮಾನಾಥನೆ ರಾಮನ ದಿವಿಜರ ಮೊರೆಯಿಂ || ಮಾನವರೂಪದೊಳವತರಿ | ಸೀ ನೆಲಕೆಳಂದನಸುರಕುಲಮಂ ವಧಿಸಲ್ | ೧೦೪ |