ಪುಟ:ಹನುಮದ್ದ್ರಾಮಾಯಣಂ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

64 || ೧೦ ಹನುಮದ್ರಾಮಾಯಣ. ಪರಿಹರಿಪುದೆಂದು ಸಿಡಿಲಂ | ಕರೆವುದೊ ಎನೆ ಮೊರೆವುತಿದ್ದು Fದಾ ಭೇಕಕುಲಂ || ೭ | ಜ್ಯೋತಿರ್ಲತೆನೀಪದ್ರುಮ ಕೇತಕಿಗಳುಗುಳನಾಂತು ರಾರಾಜಿಸುಗುಂ || ಭೂತಳದೊಳೆತ್ತಲುಂ ಪ್ರತಿ | ವಾತಭಯಂ ಪೆರ್ಚಿದತ್ತು ವರ್ಷಾಗಮದೊಳ್ || ೮ || ಕೋಗಿಲೆಯ ಕೂಗು ಕುಗ್ಗಿ Fತು | ಸೋಗೆಗೆ ಚೊಕ್ಕಳಿಕೆಯಾದುದಂಚೆಯ ಬಳಗಂ !! ಸಾಗಿತು ಮಾನಸದೆಡೆಗಂ || ಸಾಗರರವಮೈದೆ ತೀವಿತವನೀತಳಮಂ | ೯ | ಖಗಶಶಿಗಳ ವೋ ಕಾಣರ್‌ | ಖಗತತಿ ಮಿಗೆ ಚರಿಸದಾಯ್ತು ಗಗನಾಂಗಣದೊಳ್ || ಮುಗುಳಂಬನುರುಬೆ ಪೆರ್ಚ್ಚಿತು | ಮುಗಿಯಲ್ ಗ್ರೀಷ್ಮಾಧಿನಾಥನೋಲಗಮಾಗಳ್ ಸುರವರ್ತ್ಯಾಬಲೆಯಂಬಕ | ಸುರುಚಿಯೋ ಗಗನೋರುಭಟನ ಖಡ್ಗದ ಪೊಳೆವೋ || ಶರದೊಡನೆ ಪಾರ್ವ ಮತ್ತ್ವ ! ಸ್ಪುರಣಮೊ ಎನಲೆಸೆದುದಂದು ವಿದ್ಯುನ್ನಿಚಯಂ | ೧೧ || ನೆನೆವ ಮಯೂರಕ್ಕಶನಮ್ | ನನುವಿಂದಾಂ ಕುಡುವೆನೆಂದು ಘನಪತಿಯುರಿಯಂ || ಕರೆವನೋ ಫಣಿಪನ ಮೇಲೆನೆ | ಭರದಿಂದ ಸಿಡಿಲ ಗಡಣಮೆರಗಿದುದಿಳೆಯೊಳ್ | ೧೨ 9. ವಾತಮೃಗೇಂದ್ರಂ ಜಲದ | ವಾತಮತಂಗಜಮನ್ನೆದೆ ತಿವಿಯಲ್ಕಂಭೋ || ಝೂತಸುಮೌಕ್ತಿಕಮುದಿರ್ಗುದೊ | ಭೂತಳಕೆನೆ ಸೂಸಿದತ್ತು ವರ್ಷೋಪಲಮುಂ | ೧೩ || ತನಗೊಂದೆ ಋತುವ ದೊರೆತನ | ಮನಿತರೊಳುಪಕಾರಿಯೆನಿಪೆನೆಂದಂಬುಧಿಯಿಂ || ವನಮಂ ತಂದುಂ ಮಿಗೆ ಮೇ | ದಿನಿಗಿಡುವನೋ ಎಂಬೋಲೆಸೆದನಂಬುದನಾಥಂ || ||