ಚತುರ್ಥಾಶ್ಯಾಸ. ಅವನಂ ರಾವಣನೆನುತಂ | ತವೆ ಭಾವಿಸಿ ರೋಷದಿಂದೆ ಗಿರಿನಿಭಖಳನಂ || ಪವಿಸನ್ನಿಭಮುಷ್ಟಿಯೊಳಂ | ತಿವಿತಿವಿದುಂ ಕೊಂದರೆದೆ ಮರ್ಕಟವೀರರ್ \ ೭೫ || ಮುಂದೆಯ್ತರೆ ಬಟ್ಟೆಯೊಳಂ | ಬಂಧುರತರವಾದ ವಿಪಿನಮಧ್ಯದ ಕೊಳನಂ || ನಿಂದೀಕ್ಷಿಸಿ ಶಾಖಾಮೃಗ | ವೃಂದಂ ನೀರ್ಗುಡಿಯಲಿಳಿದುದದನೇನೇಳ್ಳೆಂ || ೭೬ | ಇಳಿಯಿಳಿಯಲ್ಲಾ ಕೊಳಮುಂ || ಬಿಲಮಾಗಿರೆ ಚೋದ್ಯವಟ್ಟು ಕರ್ಗಳಲೆಯೊಳ್ || ಕಿಲಿಕಿಲಿಯೆನ್ನು ತೆ ವಾನರ | ರೊಳಪೊಕ್ಕರ್ದಾರಿಗಾಣದತಿಭೀತಿಯೋಳಂ 2 | ಪಿಂದಿರುಗಲಸದಳಂ ಮಿಗೆ ! ಮುಂದಡಿಯಿಡೆ ಬಟ್ಟೆಗಾಣದಿದೆ ಇದಕಿನ್ನೆ | ಮ್ಮಿಂದೇನಕ್ಕುಮೊ ಆಪ | ದ್ವಾಂಧವನಂ ನೆನೆವಮೆಂದು ನುಡಿದಂ ಹನುಮಂ || ೭೮ || ಹನುಮಂತನೆಂದುದಂ ಕೇ ! ೪ನುವಿಂ ಶ್ರೀರಾಮನಾಮಮಂ ನೆನೆವುತ್ತಂ | ಮನದುರುಭೀತಿಯನುಳಿದುಂ | ಬಿನದದೆ ನಡೆತಂದಿದೆ ತಳ್ಳಿರೆ ಕಯ್ದ ಲ್ | 1 ೭೯ || ನಾಮದ ಮಹಿಮೆಯದೆನಿತೋ | ತಾಮಸಮಂ ಪರಿದ ಮುನಿಯ ಮನದಂದದೊಳು || ದ್ವಾ ಮಂ ಧಾಮಂ ಕಣೋಳೆ | ನೇಮದಿನಾ ಪ್ರಭೆಯೊಳೆಯೀದರ್ ಕಪಿವೀರರ್ || ಲೇಂ ! ಫಲಪುಷ್ಪಭರಿತತರುಲತೆ | ಗಳ ಸೊಂಪಿಂ ಸೆಂಪನಾಂತ ಖಗಮೃಗತತಿಯಿಂ || ನಳಿನಾಕರಂಗಳಿಂ ಮಣಿ | ಶಿಲೆಯಿಂದಂ ಮೆರೆವ ದಿವ್ಯಧರೆಯಂ ಕಂಡರ್ 1{ ಲೇ | ರವಿಚಂದ್ರರುದಯಮಿಲ್ಲದೆ !! ಪ್ರವಿಲಸಿತಪ್ರಭೆಯೊಳೊಪ್ಪುತಿರ್ಪುದು ಧರೆಯುಂ ||
ಪುಟ:ಹನುಮದ್ದ್ರಾಮಾಯಣಂ.djvu/೮೧
ಗೋಚರ