ಪುಟ:ಹನುಮದ್ದ್ರಾಮಾಯಣಂ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಂಚಮಾಶ್ವಾಸ. ತಳಿರಡಿಗಳ ನಲ್ನೋಡೆಗಳ | ಸೆಳೆನಡುವಿನ ಬಟ್ಟಮೊಲೆಯ ನಳಿದೋಳಳ ಮಂ | ಜುಳಮುಖದಾಯತನೇತ್ರದ | ಲಳನೆಯನುರೆ ನೋಡಿ ತನ್ನೊಳಾಳೋಚಿಸಿದಂ 1 ೬೦ | ಇವಳಿ ಜನಕರಾಜನ | ಕುವರಿಯದೇಕಿಲ್ಲಿ ರಾಮನರಿಸಿದ ಕುರಿಮಂ || ತವೆನೊಳ್ಳೆನೆಂದು ಚರಣಮ | ನವಲೋಕಿಸೆ ಕಾಕರೇಖೆಯಿರೆ ಮೆಯ್ದೆಗೆದಂ 11 ೬೧ || ಪರಮಪತಿವ್ರತೆಯನುಪಮ || ಚರಿತೆಯೆನಲ್‌ ರಾಮನರಸಿ ದನುಜಾಧಮನಂ || ಬೆರೆವಳೆ ವಿವೇಕಮಿಲ್ಲದೆ | ಮರುಳೆಯನಾಂ ಸೀತೆಯೆಂದು ತಿಳಿದನೆಯಕಟಾ \\ ೬೨ || ನಿರಯಕೆ ಭಾಜನನಾದಂ || ಹರಹರ ತಾನೆಂದು ಮರುಗಿ ಮರಳಲ್ಲಿಂದಂ || ಕರಮೆಸೆವ ಚಂದ್ರಶಾಲೆಯ | ನುರುಮಣಿಮಯ ಧನದಪುಷ್ಪ ಕಮನೀಕ್ಷಿಸಿದಂ 1 ೬೩ 1. ಧನಧಾನ್ಯದ ಕೋಶಗಳಂ | ಮಿನುಗುವ ಶಸ್ತ್ರಾಸ್ತ್ರಗೃಹಗಳಂ ಶೋಧಿಸುತಂ || ಹನುಮಂ ಬರೆ ಕಂಡಂ ಪಾ | ವನಮೆನಿಪ ವಿಭೀಷಣಾಲಯದ ಸಂಭ್ರಮಮಂ ಗೆ ೬೪ | ಹರಿನಾಮಕೀರ್ತನೆಗಳಿಂ || ಹರಿದಾಸರ ನಾಟ್ಯದಿಂದೆ ಬೃಂದಾವನದಿಂ || ಕರಮೆಸೆವ ಗೃಹಮನೀಕ್ಷಿಸಿ | ಕರಿವರದನ ಭಕ್ತನೀತನೆಂದುಂ ಮರಟ್ಟಂ - {{ ೬೫ | ಆ ನಗರವೆಲ್ಲಮಂ ಮಿಗೆ | ತಾನೊರ್ವನೆ ನಿಶೆಯೊಳರಸಿ ಕಾಣದೆ ಸೀತಾ | ಮಾನಿನಿಯನಲ್ಲಿ ಕಡುದು | ಮ್ಯಾನದೊಳುರುಸೌಧವೊಂದನೇರಿದನಾಗಳ್ 11 ೬೬ | ನಿನಗೇಕೆ ಚಿಂತೆ ಸೀತಾ | ವನಿತೆಯಶೋಕಾಖವನದೊಳಿರ್ಪಳ್ಳಿ” ನೋ ||