ಮನೆಯಲ್ಲಿ ಮಾಡುತ್ತಿದ್ದ ದೋಸೆ ಒಂದು ಅಂಗೈ ಮಂದವಾಗಿ, ೬ ದೋಸೆಗೆ ಅರ್ಧ ಸೇರು ಹಿಟ್ಟು ಬೇಕಾಗುತ್ತಿದ್ದಿತು. ಅವರ ತಾಯಿಯವರು, ಕಿಟ್ಟುವು ತಿನ್ನುತ್ತಿರುವಾಗ, ಇತರರನ್ನು, ಅವನಿಗೆ ದೃಷ್ಟಿಯಾಗಬಹುದೆಂದು ಒಳಗೆ ಬರಗೊಡುತ್ತಿರಲಿಲ್ಲ. ನಮ್ಮ ಸ್ನೇಹಿತರಂತೂ 'ಪ್ರಾಣಾಹುತಿಗೇ ಕಿಟ್ಟುವಿಗೆ ಅರ್ಧ ನಾವು ಅಕ್ಕಿ ಅನ್ನ-ಬೇಕು' ಎಂದು ಹಾಸ್ಯ ಮಾಡುತ್ತಿದ್ದರು.
ಕಿಟ್ಟುವು ನಮ್ಮೂರ ಸ್ಕೂಲಿನಲ್ಲೇ 'ಲೋವರ್ ಸೆಕಂಡರಿ ಪರೀಕ್ಷೆ ಪ್ಯಾಸ್' ಮಾಡಿಬಿಟ್ಟ. ಆಮೇಲೆ ಅವನನ್ನು ಹಾಸನಕ್ಕೆ ಇಂಗ್ಲಿಷ್ ಓದುವುದಕ್ಕೆ ಕಳುಹಿಸಬೇಕಾಯಿತು. ಅವರ ತಾಯಿಯವರಿಗೆ, “ಇವನಿಗೆ ಹೋಟಲಿನಲ್ಲಿ ಹೊಟ್ಟೆ ತುಂಬ ಅನ್ನ ಹಾಕ್ತಾರೋ ಇಲ್ಲವೋ” ಎಂಬ ಯೋಚನೆ. ಅವರ ತಂದೆಯವರಿಗೆ "ಅನ್ಯಾಯವಾಗಿ ಹೋಟಲಿನಲ್ಲಿ ತಿಂದು ಜಾತಿ ಕೆಟ್ಟು ಹೋಗ್ತಾನಲ್ಲ” ಎಂಬ ಚಿಂತೆ. ಅವರು ಬಹಳ ವೈದಿಕರಾದುದರಿಂದ ಹೋಟೆಲಿನ ಹೆಸರು ಕೇಳಿದರೆ ಅವರಿಗೆ ಮೈಯೆಲ್ಲಾ ಉರಿಯುತ್ತಿದ್ದಿತು. ಆದರೆ ನಮ್ಮೂರ ರಾಮಣ್ಣನವರ ಮಗ ನರಹರಿಯು “ಏನೂ ಪರವಾಗಿಲ್ಲ, ಹೋಟಲಿನಲ್ಲಿ ಬಹಳ ಮಡಿಯಾಗಿದ್ದಾರೆ. ನಾನು ಊಟ ಮಾಡುತ್ತಿರುವ ಹೋಟಲಿನಲ್ಲಿ ಬ್ರಾಹ್ಮಣರನ್ನು ಹೊರತು ಇತರರನ್ನು ಸೇರಿಸುವುದೇ ಇಲ್ಲ" ಎಂದು ಹೇಳಿದ. ನರಹರಿಗೆ ಹಾಸನದ ಒಂದು ವರ್ಷದ ಅನುಭವವಾಗಿತ್ತು. ಕಿಟ್ಟುವಿನ ತಂದೆ ಅವನ ಮಾತನ್ನು ನಂಬಿ, ಕಿಟ್ಟುವು ಹಾಸನಕ್ಕೆ ಹೋಗಿ ಹೋಟೆಲಿನಲ್ಲಿ ಊಟಮಾಡಿಕೊಂಡು, ಇಂಗ್ಲಿಷ್ ವಿದ್ಯಾಭ್ಯಾಸವನ್ನು ಮುಂದರಿಸಬಹುದೆಂದು ಒಪ್ಪಿದರು. ಹುಡುಗರು ಮಾತ್ರ "ನಿನಗೆ ಊಟಹಾಕಿ ಹೋಟಲಿನವನು ಮಟ್ಟವಾಗಿ ಬಿಡುತ್ತಾನೆ" ಎಂದು ಹಾಸ್ಯ ಮಾಡಿದರು.
ನರಹರಿಯ ಕಿಟ್ಟುವೂ ಒಂದು ಮನೆಯ ಮಹಡಿಯ ಕೊಠಡಿಯನ್ನು ಬಾಡಿಗೆಗೆ ತೆಗೆದುಕೊಂಡು, ಹೋಟಲಿನಲ್ಲಿ ಊಟಮಾಡುತ್ತಿದ್ದರು. ಕೊಠಡಿಯಿಂದ ಹೋಟಲು ಸುಮಾರು ಎರಡು ಫರ್ಲಾಂಗು ದೂರವಿತ್ತು. ಒಂದು ಭಾನುವಾರ ಅವರಿಬ್ಬರೂ ನಮ್ಮೂರಿಗೆ ಬಂದರು. ಕಿಟ್ಟುವಿನ ತಾಯಿಯೂ, ನರಹರಿಯ ತಾಯಿಯೂ ಅವರಿಬ್ಬರಿಗೂ