ಪುಟ:ಹಳ್ಳಿಯ ಚಿತ್ರಗಳು.djvu/೧೫೨

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
೧೩೮
ಹಳ್ಳಿಯ ಚಿತ್ರಗಳು

"ಬಂದೂಕವನ್ನು ಎದೆಗೆ ಹೊಡೆದುಕೊಂಡು ಸತ್ತ."

ನನಗೆ ಏನೋ ಹೊಳೆಯಿತು. "ಹುಡುಗಿಯೋ?” ಎಂದೆ.

“ಅವಳೂ ಆ ದಿವಸವೇ ಭಾವಿಗೆ ಬಿದ್ದು ಸತ್ತಳು.".

ನನಗೆ ನಿಶ್ಚಯವು ಸ್ಪಷ್ಟವಾಗಿ ಹೊಳೆಯಿತು. ನನ್ನ ಸ್ನೇಹಿತನು "ತಿಳಿದೂ ತಿಳಿದೂ ಹುಡುಗಿಯ ತಂದೆಯು ಅವಳನ್ನು ಮತ್ತೊಬ್ಬ ಕಾಫಿ 'ಪ್ಲಾಂಟರ್'ಗೆ ಮದುವೆ ಮಾಡಲು ಲಗ್ನವನ್ನಿಟ್ಟನು. ಲಗ್ನಕ್ಕೆ ಮೊದಲ ದಿವಸ ರಾತ್ರಿ ಈ ಎರಡು ಆತ್ಮಹತ್ಯಗಳೂ ನಡೆದುಹೋದುವು" ಎಂದನು.

ನನಗೆ ಮಂಕು ಹಿಡಿದಂತಾಯಿತು. ಮನಸ್ಸು ಆ ದಿನವೆಲ್ಲಾ ನನ್ನ ಸ್ವಾಧೀನಕ್ಕೆ ಬರಲಿಲ್ಲ.