ವಿಷಯಕ್ಕೆ ಹೋಗು

ಪುಟ:ಹಳ್ಳಿಯ ಚಿತ್ರಗಳು.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ನಾವು ಮಾಡಿದ ಒಂದು ಯಾತ್ರೆ
೩೭

ಜಗ್ಗುತ್ತಿತ್ತು. "ಬಸ್ತಿಯ ಬೀಗದಕ್ಕೆ ನಿನ್ನ ಬಳಿ ಇದೆಯೇನಮ್ಮಾ?” ಎಂದು ನಾನು ಆಕೆಯನ್ನು ಕೇಳಿದೆ. ಹುಡುಗಿಯು ಕತ್ತನ್ನು ಒಂದು ಕಡೆಗೆ ಕೊಂಕಿಸಿ "ನನ್ನ ಬಳಿ ಇಲ್ಲ” ಎಂದಳು. ಅವಳ ಮುಖದಲ್ಲಿ ಚೇಷ್ಟೆಯ ನಗೆ ತೋರಿತು. ಧ್ವನಿಯು ವಿನೋದದಿಂದ ಕೂಡಿತ್ತು. ಅವಳ ಬಳಿಯೇ ಬೀಗದಕ್ಕೆ ಇರಬಹುದೆಂದು ನಾವು ಯೋಚಿಸಿ ಅವಳು ಕರುವನ್ನು ಬಿಡುವವರೆಗೆ ಕದದ ಕಿಂಡಿಯಿಂದ ಒಳಗಡೆ ನೋಡುತ್ತಾ ನಿಂತಿದ್ದೆವು. ಅನಂತರ ನಾವು ನೂರಾರು ಮೈಲಿಯಿಂದ ಬಂದವರೆಂದು ಹೇಳಿ ಸ್ವಲ್ಪ ವಿನಯದಿಂದ ಅವಳನ್ನು ಬೇಡಿದುದಾಯಿತು. ಕತ್ತಿನ ನೂಲಿನಲ್ಲಿದ್ದ ಬೀಗದಕೈ ಹೊರಕ್ಕೆ ಬಂತು. ಗೋಮಟೇಶ್ವರನಿಗೆ ನಮ್ಮ ಮನ್ನಣೆಯನ್ನು ಸಲ್ಲಿಸಿ ಕಂಬದಲ್ಲಿ ಮುಖವನ್ನು ನೋಡಿಕೊಂಡು ಹೊರಕ್ಕೆ ಬಂದೆವು.

ಆ ವೇಳೆಗೆ ಗಂಟೆ ಹನ್ನೊಂದಾಯಿತು. ಆದರೆ ಆಕಾಶವು ಮೋಡಗಳಿಂದ ಕವಿದಿದ್ದುದರಿಂದ ನಮಗೆ ಬಿಸಲಿನ ಬೇಗೆಯು ಗೊತ್ತಾಗಲಿಲ್ಲ. ಬೇಲೂರು ಅಲ್ಲಿಂದ ಹತ್ತು ಮೈಲು ದೂರ ಮಾತ್ರ. “ನಡೆದುಕೊಂಡೇ ಹೊರಟುಹೋಗೋಣ, ಬಸ್ಸು ಬರೋದು ಸಾಯಂಕಾಲ; ಅಲ್ಲಿಯವರೆಗೆ ಇಲ್ಲಿ ಯಾತಕ್ಕೆ ನೊಣ ಹೊಡೆಯುತ್ತಿರಬೇಕು" ಎಂದ ಗುಂಡ.

ನಾನು “ಆಗಬಹುದು. ಆದರೆ ತಡಿಯಲಾರದ ಹಸಿವಲ್ಲ ನನಗೆ ಏನು ಮಾಡೋದು” ಎಂದೆ.

ಗುಂಡನು "ಏನು ರಾವಣನ ಹೊಟ್ಟೆಯೋ ನಿನಗೆ, ಹಸಿವು ಹಸಿವು ಅಂತ ಪ್ರಾಣಬಿಡ್ತೀಯ” ಎಂದ.

ನಮ್ಮ ಎದುರಿಗೆ ಒಂದು ಅಂಗಡಿಯಿದ್ದಿತು. “ಅಲ್ಲಿ ಬಾಳೆಯ ಹಣ್ಣನ್ನು ತೆಗೆದುಕೊಳ್ಳೋಣ” ಎಂದೆ. ಗುಂಡನು ಈ ಮಳೆಗಾಲದಲ್ಲಿ ಆ ಬಾಳೆಹಣ್ಣನ್ನು ತಿಂದರೆ ಹೊಟ್ಟೆಯೆಲ್ಲಾ ನಡುಗುವುದಕ್ಕೆ ಪ್ರಾರಂಭವಾಗುತ್ತದೆ. ನನಗೆ ಬೇಡ. ಬೇಕಾದರೆ ನೀನು ತೆಗೆದುಕೊ” ಎಂದ.

ಒಬ್ಬನಿಗೆ ಸಾಕೆಂದು ಒಂದು ಆಣೆಯನ್ನು ಕೊಟ್ಟು ೫ ಬಾಳೆಯ ಹಣ್ಣನ್ನೂ ಸ್ವಲ್ಪ ಬೆಲ್ಲವನ್ನೂ ಕೊಂಡುಕೊಂಡೆ. ಅರ್ಧ ಮೈಲು ಹೋದ ನಂತರ ರಸ್ತೆಯ ಪಾರ್ಶ್ವದ ದಿಣ್ಣೆಯ ಗರಿಕೆಯ ಮೇಲೆ ನನ್ನ