ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಡೆದುಬಂದ ಲಕ್ಷ್ಮಿ

೯೫

ರುವ ಇವರನ್ನು, ಆದೆ ಆ ಇರಾಣಿಯವನ ಅಂಗಡಿಯಲ್ಲಿ ಮತ್ತೆ ಹೊಸದಾಗಿ ಅಂಗಡಿ ಹೂಡಿದ ಮುದುಕನೋರ್ವನು, ಬಹುತೀಕ್ಷ್ಣ ದೃಷ್ಟಿಯಿಂದ ನೋಡಿದನು. ಅವರು ಏತಕ್ಕಾಗಿ ಹಾಗೆ ಸುಳಿದಾಡು ತಿರಬಹುದೆಂಬುದನ್ನು ಕೂಡಲೆ: ತರ್ಕಿಸಿದನು; ಕಣ್ಣನೆ -ಕೈಸನ್ನೆ ಮಾಡಿ ತನ್ನ ಬಳಿಗೆ ಮೆಲ್ಲನೆ ಅವರನ್ನು ಕರೆದನು-ತೀರ ಮೆಲ್ಲಗೆ ಕೇಳಿದನು: ಮಕ್ಕಳೇ, ನೀವು ಬಂದದ್ದೆಲ್ಲ ನನಗೆ ಗೊತ್ತಿದೆ ಏನೋ ಕಳಪಿಲೆ ಮಾರುವದಿದೆಯಲ್ಲವೆ ? ........ ಬನ್ನಿರಿ........ ಒಳೆಕ್ಕಾದರೂ ಬನ್ನಿರಿ, ನಿಮಗೆ ಪ್ರವಾಸದಿಂದ ಆಯಾಸವಾಗಿರ-ಬಹುದು, ಹಸಿವೆ ನೀರಡಿಕೆಗಳಾಗಿಬಹುದು; ಮೊದಲು ಸ್ವಲ್ಪ ಫಲಾಹಾರ ಮಾಡಿರಿ, ಬನ್ನಿರಿ.”

ತರುಣರಿಗೆ ಅಪರಿಚಿತ ಸ್ಥಳದಲ್ಲಿ, ಅಂತಹ ದೊಡ್ಡ ಪಟ್ಟಣದಲ್ಲಿ ತಮ್ಮಂತಹ ಸಣ್ಣ ಹುಡುಗರನ್ನು ಮೊದಲು ತಿನ್ನಿರಿ-ಬನ್ನಿರಿ ಎಂದು ಕರೆಯುವ ಓರ್ವ ಸಭ್ಯಗೃಹಸ್ಥನಾದ ಮುದುಕನನ್ನು ಕಂಡ ಕೂಡಲೆ ಆನ೦ದವಾಯಿತು. ಅತ್ತಿತ್ತ ನೋಡುತ್ತ ತಟ್ಟನೆ ಒಳಹೊಕ್ಕರು.

ಮುದುಕನು ಅವರಿಗೆ ಹೊಟ್ಟೆ ತುಂಬ ಬಗೆಬಗೆಯ ಫಲಾಹಾರವನ್ನು ತಿನಿಸಿ, ಮೊದಲು ಅವರ ಮನಸ್ಸನ್ನು ಶಾಂತಗೊಳಿಸಿದನು. ಇಬ್ಬರೂ ಆ ಮುದುಕನ ಆದರಾತಿಥ್ಯಗಳಿಗೂ, ಸವಿನುಡಿಗಳಿಗೂ ಮರುಳಾದರು. ಅಲ್ಲದೆ, ತಾವು ಸದ್ದಿಲ್ಲದೆ ಸಾಧಿಸಬೇಕಾದ ಕಾರ್ಯವು ಅವನಿಂದ ಮಾತ್ರ ಸಫಲವಾಗುವದೆಂಬದನ್ನೂ ಅವರು ಅರಿತುಕೊಂಡರು. ಆ ಸರಾಫನು ಕಳವಿನ ಆಭರಣಗಳನ್ನು ದಕ್ಕಿಸಿಕೊಳ್ಳುವವ ನಿರಲಿಕ್ಕೆ ಸಾಕೆಂದು ಅವರಿಗೆ ಮನದಟ್ಟಾಯಿತು. ಪಟಕಾದ ಚುಂಗಿ ನೊಳಗಿಂದ ಮೂರು ಸೇರಿನ ಒಂಕಿಗಳ ಹಾಗೂ ಒಂದೂವರೆ ಸೇರಿನ ಸರಿಗೆಯ ಮುದ್ದೆಯು ಹೊರಬಿದ್ದಿತು ಸೀರೆಯ ಸೆರಗಿನೊಳಗಿಂದ ಮೆಲ್ಲನೆ ಮೂಗುತಿಯು ಇಣಿಕುತ್ತ ಹೊರಗೆ ಬಂದಿತು. ಮುದುಕನ ಬಾಯಿಯಲ್ಲಿ ನೀರು ಬಿಟ್ಟವು. ಸಾವಿರಾರು ರೂಪಾಯಿ ಬೆಲೆ