ಬಾಳುವ ಒಡವೆಗಳನ್ನು ನೂರಾರು ರೂಪಾಯಿಗಳಿಗೆ ಮಾರಿದ್ದಾಯಿತು. ಹುಡುಗರು ಇನ್ನೂ ಕೆಲವೊಂದಷ್ಟು ಹಣವನ್ನು ಕೊ ಡಿ ರೆ೦ದು ಕೇಳಿದಾಗ, ಮುದುಕನು ಅವರಿಗೆ ಪೋಲೀಸರ ಬೆದರಿಕೆ ಹಾಕಿದ. ಹುಡುಗರಿಗೆ ತಮ್ಮ ಚಕ್ಕಂದಕ್ಕೆ ಸಾಕಷ್ಟು ಹಣವು ದೊರೆತದ್ದರಿಂದ ಅವರೂ ತಮ್ಮ ಹಾದಿಗೆ ಹೊರಟರು. ಮುದುಕ ಮತ್ತೆ ಕರೆದ. "ಮಕ್ಕಳೇ, ನಿಮಗೆ ಇಳಕೊಳ್ಳಲಿಕ್ಕೆ ಸ್ಥಳವು ಬೇಕಿದ್ದರೆ, ಇನ್ನೆಲ್ಲಿಯೂ ಹೋಗಬೇಡಿರಿ; ನಾನು ವ್ಯವಸ್ಥೆ ಮಾಡಿಕೊಡುವೆ !" ಹುಡುಗರಿಗೂ 'ರೋಗಿ ಬಯಸಿದ್ದೂ ಹಾಲು, ವೈದ್ಯನು ಕೊಟ್ಟಿದ್ದೂ ಹಾಲಾ'ಯಿತು. ಅದೇ ಅಂಗಡಿಯ ಅಟ್ಟದ ಮೇಲೆ ವಾರಕ್ಕೆ ಇಪ್ಪತ್ತೈದು ರೂಪಾಯಿಗಳ ಬಾಡಿಗೆ ಗೊತ್ತು ಮಾಡಿ ತಮ್ಮ ಗಂಟು ಗದಡಿಗಳನ್ನು ಅಲ್ಲಿಟ್ಟು ಪೇಟೆಗೆ ಹೋಗಿಬರುವದಾಗಿ ಹೇಳಿ ಹೋದರು.
ಒಂದೆರಡು ಕೀಲಿಯ ಬೋಡುಗಳು, ಹಣಿಗೆ, ಕನ್ನಡಿ, ಎರಡು ಸೂಟುಕೇಸುಗಳು, ಎರಡು ಮೂರು ತರದ ಸುವಾಸಿಕ ಕೇಶತೈಲ-ಸೆಂಟ್ಸುಗಳು, ಸಿಲ್ಕಿನ ಅರ್ಧ ಡರುನ ಕರವಸ್ತ್ರಗಳು, ಕೈಪ್ಪು- ಪಿನ್ನು, ತರುಣಿಯ ಕೈಗೋಂದೊಂದು ಪೌನಿನ ಬಳೆ, ಒಂದು ಇಮಿಟೇಶನ್ ಉಂಗುರ, ರೇಶಿಮೆಯ ನಾಜೂಕಾದ ಇಮಿಟೇಶನ್ ಜರತಾರಿ ಸಾಲಗಳು ನಾಲ್ಕಾರು ಫ್ಯಾಶನೇಬಲ್ ಬ್ಯಾವುಜುಗಳು, ತರುಣನಿಗೆ ಒಂದೆರಡು ಸೂಟು, ಒಂದು ಇಮಿಟೇಶನ್ ಹರಳಿನ ಉಂಗುರ ವ್ಯಾಸಲಾಯಿನ್, ಸ್ಕೋ - ಇನ್ನೂ ಏನೇನೊ ಮೋಜಿನ ವಸ್ತುಗಳನ್ನುಕೊಂಡರು. ಅಟ್ಟಕ್ಕೆ ಬಂದು ಇಬ್ಬರೂ ಡ್ರೆಸ್ ಮಾಡಿಕೊಂಡು ಕನ್ನಡಿಯಲ್ಲಿ ನೋಡಿಕೊಂಡರು. ಕಾಲುಗಳು ಬರಿಯವಿರುವವೆಂದು ಗೊತ್ತಾಯಿತು. ಮೊಟ್ಟೆಗಾರರ ಅಂಗಡಿಗಳನ್ನೆಲ್ಲಾ ತಿರುಗಿದ್ದಾಯಿತು. ಇಬ್ಬರೂ ಕನ್ನಡ ಮೂರು ನಾಲ್ಕು ಇಯತ್ತೆಯವರೆಗೆ ಎಂದೋ ಶಾಲೆ ಕಲಿತು, ಚಿಕ್ಕಂದಿನಲ್ಲಿಯೆ ಶಾಲೆ ಬಿಟ್ಟು ಬರಿಯ ಹುಂಬ ಜನರಲ್ಲಿಯೆ ಜನ್ಮ ಕಳೆದವರು.