ವಿಷಯಕ್ಕೆ ಹೋಗು

ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಡೆದುಬಂದ ಲಕ್ಷ್ಮಿ
೧೦೫

"ಅಯ್ಯ ಬಾಯಾರ, ಮತ್ತೇನ ಮಾಡ್ಲಿರೀ? ದಿನಒಂದಕ ಓಡ್ಯೋಡಿ ಹ್ವಾದ್ರ ಅವಕೂ ಸುಕು ಇಲ್ಲಾ, ನಂದನಕಾ ಗೋಳಾನ ಮಾದೇವನ ಬಲ್ಲಾ, ಇಟ್ಟ್ ಮಾಡಿದ್ದಕ್ಕ ಸಾವಿರ ಮಂದಿ ಸಾವಿರ ಮಾತಾಡತಾರಿ, ಯಾರಂತಾರ, ಈ ಮುದತಿಗೇನ ಮುದಿಹುಚುದ ಹಿಡೀತು. ಮಗನ ಮಾತ ಕೇಳಿ?, ಯಾವಾಕಿ ದಶಿಂದ ತಂದೆಲ್ಲಾ ಹಾಳಾತೂ ಆಕೆ ಕೂಡ ಅವನ ಮದವೀ ಮಾಡಿದ್ಲು, ಯಾರಂತಾರ, ಇಷ್ಟ ಹಣಾ ಕಳದಾನ, ಮತ್ತೂ ಅವನ್ನ ಮನ್ಯಾಗ ಸೇರಿಸಿಕೊಂಡು ಮದಿವಿ? ಸೊಸಿಯಿದ್ದ ಈ ಮೂಳನ್ನ ಮನಿ ಸೇರಿಸಿಕೊಂದಾಳ ಅಂತ ತಮ್ಮ, ತಮ್ಮನ ಹೇಣ್ತಿ, ದೈವದಾವು ಕೇಳಾಕ್‍ಹತ್ಯಾರ. ಅವನಾರ‍s ನಾ ಕರೇವ ಹೇಳ್ರ್ಯಾ,-ಈ ಜಲುಮದಾಗಂಕಾ ನಾ ಮದಿವಿ ಕಂಡಿಲ್ಲಾ. ಗಂಡ, ಗಂಡನ ಸುಕಾ, ಪಿರೀತಿ ಅನ್ನೂದ ಗೊತ್ತಿಲ್ಲಾ. ಹ್ವಾದ ಜಲಮದಾಗಿನ ಪಾಪದ ಪಲಾ ಈ ಜಲ್ಮದಾಗ ಉಣ್ಣಾಕ್‍ಹತ್ತೇನಿ. ಯಾವಾಗ ಅವಂದೂ ಆಕೀದೂ ಪಿರೀತಿ ಕೂಡೇತಿ ಅಂದಬಳಿಕ, ಹಿಂತಾ ಯಾಳೇದಾಗ ನಾ ಆ ಹುಡಗೂರ್‍ನ ಅಗಲಿಸಿದ್ರ, ಮತ್ತೆ ಮುಂದಿನ ಜಲ್ಮಕ್ಕನೂ ಇದs ಎಡೀ ನನಗ ಬಂದೀತೊ ಬರಾಕಿಲ್ರ್ಯೋ?"

"ಮತ್ತೆ ಮೊದಲಿನ ಸೊಸೀ ಗತಿಯೇನ ದ್ಯಾಂವಕ್ಕಾ? "

"ಆಕೀನೂ ಇರ್‍ಲಿ, ಈಕೀನೂ ಇರ್‍ಲಿ- ಅವರೂ ಎಲ್ಲಾರೂ ದುಡೀಲಿ, ನಾನೂ ನನ್ ಜಲಮಿರೂತಂಕಾ ಜೀವಾ ಹತೀಮಾಡಿ ಇವರ ಕಾಲಾಗ ನಾಕ ರೊಕ್ಕಾ ಮಾಡಾಕ ತಯಾರದೇನಿ, ಅಂವಗ ದೊಡ್ಡ ಹೇಣ್ತ್ಯಾದ್ಲೂ-ನನ್ ಕೈಯಾಗ ದುಡ್ಯಾಕ ಗಟ್ಟುಳ್ಳ ಸೊಸೀ ಆದ್ಲೂ. ಏನಂತೀರಿ ಬಾಯಾರ ಇದಕ ನೀವು?"

ನಾ ಹೇಳ್ಲ್ಯಾ ದ್ಯಾಂವಕ್ಕಾ, ಬೇಖಾದ್ದವರು ನಿನಗೆ ಬೇಖಾದ್‍ಹಾಂಗ ಅನಕೋವಲ್ರ್ಯಾಕ-ನೀನು ನಿನ್ನ ಬಳಗ, ದೈವಾ, ಹಣಾ, ಗುಣಾ, ನಾನಾ-ಮರ್ಯಾದೀ ಎಲ್ಲಾ ಒತ್ತಟ್ಟಿಗಿಟ್ಟು, ಅವರವರ ಪ್ರೀತಿ ಕೂಡಿದ್ದರ ಕಡೆ ಲಕ್ಷಕೊಟ್ಟು ಲಗ್ನಾ ಮಾಡಿ ಅವರ ಜನಳ