ಈ ಪುಟವನ್ನು ಪ್ರಕಟಿಸಲಾಗಿದೆ
೧೦೬
ಹೂಬಿಸಿಲು
ಕಲ್ಯಾಣ ಏನ ಮಾಡಿದೆಲ್ಲಾ, ಇದೊಂದು ಭಾಳ ಸಾಹಸದ ಕೆಲಸಾ ಮಾಡಿದಿ ಈ ಮಾತಿನೊಳಗ ನಿನಗ ಶಾಹಬಾಸಕಿ ಕೊಡೈ ಇಡು.”
ಈ ವರುಷ ನಾನು ದ್ಯಾವನನ್ನು ಮತ್ತೆ ನೋಡುತ್ತಿರುವದು ಆ ಮೊದಲಿನ ಅವಳ ಚ೦ಗಳಿಕೆವ್ವನ ರೂಪದಲ್ಲಿ, ಸಣ್ಣ ಸೊಸೆಯು ಇನ್ನೂ ಮನೆಗೆ ಬಂದಿಲ್ಲ. ಆದರೆ ದೌಪದಿಯು ಅತ್ತೆಗೆ ತಕ್ಕ ಸೊಸೆಯಾಗಿ, ಅವಳ ಪಂಚ ಪ್ರಾಣವಾಗಿ, ಅವಳೊಡನೆ ಸರಿಗಟ್ಟಿ ಕೊಂಡು ದುಡಿಯುತ್ತ, ಗಂಡನೊಡನೆ ಬಲು ಪ್ರೀತಿಯಿಂದಿರುವಳಂತೆ. ಮದುವೆಯಾದ ಹೊಸತಾಗಿ ಸೊಸೆಯನ್ನು ಬೆನ್ನಿಗೆ ಹಚ್ಚಿಕೊಂಡು ನಮ್ಮಲ್ಲಿ ಬಂದಿದ್ದಳು ದ್ಯಾಂವಕ್ಕ.
ಆದರೀಗ ಅವಳನ್ನು ಸಣ್ಣ ಚ೦ಗಳಿಕೆವ್ವನನ್ನಾಗಿ ಮಾಡಿ ತನ್ನ ಮುಂದೆ ಹಾಕಿಕೊಂಡು, ಅವಳನ್ನು ಕಣ್ಣು೦ಬ ನೋಡುತ್ತ ನಲಿದಾಡು ತುಂಬಿದೆದೆಯಿದ ಅಭಿಮಾನಪಡುತ್ತ ಬರುವಳು.