ತೋರಿಸಿದ. ಅದು ಮೀನದ ಆಕಾರದ್ದಾಗಿರತದ-ನಿಮಾವಂತ ಸಲೂನ ಅಂದ್ರ ನಿಮಾವಂತ ಕಾಣಸ್ತದವ್ಯಾ"
ಮಧುಮತಿಯೆಂದಳು "ಹಾಂಗಾದ್ರ ಇಲ್ಲೇ ಆಡೊವು ಕಾಗದದ್ದು ಇಲ್ಲಿದ್ರ ಕರ್ಪರದ್ದು ವಿಮಾನ ಸಿಗತಿರಬೇಕು. ' ಕಟಿಂಗ ಸಲ್ಲನಂತ ಬರದಾರಲ್ಲ, ಅಂದ ಮ್ಯಾಲೆ ಕಟ್ಟಿಗಿನ ಇರಬೇಕು ನೋಡು."
ಕೃಷಿಯ೦ದಳು “ಇಷ್ಟೆಲ್ಲಾ ಪ೦ಚೆತಿ ಯಾಕಪ್ಪಾ ಅದು ? ಥಣ್ಣಗ ಆಂವಗ ಕೇಳಿದರಾತು ? ....ಏನಪ್ಪಾ ಹಾಗೊಂದು ಸಲ್ಲನ ಮಾಡಿಕೊಡತಿದಿ?"
ಆಂಗಡಿಯವನು ಮೊದಲು ಬೊಳ್ಳೆಂದು ನಕ್ಕನು. “ತಂಗೆಮ್ಮಾ, ನಿವಿಲ್ಲಿ ಬರಬಾ- - ಇದು ಹಜಾಮತಿ ಮಾಡೋ ಆಂಗಡಿ, ” ಎಂದನು.
ಮೂವರೂ ಪೆಚ್ಚು ಮುಖದಿಂದ ಓಡಿದರು. ಸ್ವಲ್ಪ ದೂರ ಹೋದ ಕೂಡಲೆ, ಸ್ಪೀಡ ಮತ್ತೆ ಕಡಮೆಯಾಯಿತು; ಆದರೆ ನಗೆಗಾರಂಭವಾಯಿತು. “ ಏನು ಹುಚ್ಚುಚ್ಚಾರ ಕೇಳೆ: ಕೃಷ್ಟೀ, ಅ೦ಗಡಿಯಂವಗ ? ಎ೦ದಳು ಮಧುಮತಿ.
ಕೃಷ್ಟಿಯೆಂದಳು " ಆಹಾ, ನೀವೇನು ಭಾಳ ಶಾಣ್ಯಾರು...... ಮದ್ಧ ಕಳುವು ಮಾಡ್ಲಿಕ್ಕೆ ಹೇಳೋದು, ಅಲ್ಲಿಂದ ಕಳಗನ ಹೆಸ. ರಿಡೊದು.... " ಮತ್ತೆ ನಗುವಿಗಾರಂಭ. ಆ ಕಿಡಿಗೇಡಿ ಶಾಂತೆಗೆ ಇಷ್ಟರ ಮೇಲಿಂದ ಮನಸು ತೃಪ್ತಿಯಾಗಲಿಲ್ಲ.
“ಹಾಂಗಾರ ನಮ್ಮ ಗಂಗಾ ತಿಂಗಳಿಗೊಮ್ಮೆ ಮೈಲಿಗ್ಯಾಗ. ಲಿಕ್ಕಿಲ್ಲ ಬಲ್ಲಾಳ ಕಾಣಸ್ತದವ್ಯಾ; ಇನ್ನೂ ನಾ ಎದ್ದಿರೂದುಲ್ಲ ನೋಡು; ಅಷ್ಟ ಬೆಳಕು ಹರಿಯೊದೊರೊಳಗ ಮಡಿ ಉಟಗೊಂಡು ಆಡಿಗ್ಗೆ ಕೂತಿರತಾಳ."