ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೨

ಹೂಬಿಸಿಲು

ಮಾಲಿ ನಾನು ಕೂಡಿ ತೆಗಸೋಣೇನು?” ಎಂದು ಕೇಳಿದನು. "ಯಾಕೋ ಇಷ್ಟವಸರ? ನೀಯೇನು ತಿರುಗಿ ಬರೋದs ಇಲ್ಲ? ಏನ ಕಡೆತನಕಾನೂ ಅಲ್ಲೇ ಉಳೀತೀಯಾ? ” ಎಂದು ಅಕ್ಕನೆಂದಳು.

ಶಿವರಾತ್ರಿಯ ದಿವಸ ಮುಂಜಾನೆಯೇ ತಮ್ಮೂರಿಗೆ ಬಂದರು. ಮಧ್ಯಾನ್ಹಕ್ಕೆ ಶ್ರೀ ಸೋಮೇಶ್ವರನಿಗೆಂದು ಹೋದರು. ದರ್ಶನ ಫಲಾಹಾರಗಳಾದವು. ಮಟ ಮಟ ಮಧ್ಯಾಹ್ನ. ದಿಬ್ಬದ ಮೇಲೆ ತಮ್ಮ ಬಂಡಿಯ ನೆರೆಯಲ್ಲಿದ್ದ ಬಂಡಿಯ ನೆರಳಿನಲ್ಲಿ, ಗೋವಿಂದನು ಅಡ್ಡಾಗಿದ್ದನು. ಅವರ ತಾಯಿ ಸೊಪ್ಪನ್ನು ಹೊತ್ತಿಸಿ, ಚಹಾಕ್ಕೆಂದು ಎರಡು ಕೊಡದ ತಪ್ಪೇಲಿಯನ್ನಿಟ್ಟಳು. ಆಗ ಅಕ್ಕವ್ವನು, "ಅವ್ವಾ, ಚಹಾ ಲಗೂನ ಮಾಡಿಳಸು, ಹೋಗೊ ಬರೊ ಮಂದೀದೆಲ್ಲಾ ಕಣ್ಣು ನಿನ್ನ ದೊಡ್ಡ ತಪ್ಪಲೀ ಮ್ಯಾಲೇ ಅದ ” ಎಂದಳು. ಚಹವಾಯಿತು. ಅಷ್ಟರಲ್ಲಿ ಇಳುಕಲಿನಲ್ಲಿ ಗುಡಿಯ ಎದುರಿಗೆ ಕೋಲಾಹಲದ ಕೂಗು ಕೇಳಿಸಿತು. ಯಾವುದೋ ಹುಡುಗ ಹೊಂಡದಲ್ಲಿ ಬಿದ್ದಿದೆ ಎಂದಾರೋ ಒದರಿಕೊಂಡಂತಾಯಿತು. ಅಕ್ಕವ್ವನು "ಗೋವಿಂದೆಲ್ಲಿದ್ದಾನ ನೋಡ್ರೆ ” ! ಎಂದು ಚೀರಿದಳು.

ಆಗ ತಾಯಿಯು "ಆಕಾ ಅಲ್ಲೇ ಬಿದ್ದಾನ ನೋಡು ನಿನ್ನ ಗೋವಿಂದಾ, ಯಾಕ ಚೀರಿಕೊತೀದಿ.........” ಎಂದುತ್ತರವಿತ್ತಳು. ಇತ್ತ ಆತ ಮಲಗಿದಲ್ಲಿದ್ದ ಚಕ್ಕಡಿಯೊಳಗೆ ಬಾಳೆಯ ಹಣ್ಣನ್ನು ಸುಲಿದು ತಿನ್ನುತ್ತ ಒಕ್ಕಲಿಗರ ಎಂಟು ಹತ್ತು ಹೆಣ್ಣು ಮಕ್ಕಳು ಕುಳಿತಿದ್ದರು, ಯಾರೋ ಬಂದಿವರಿಗೊಂದೆರಡು ಅರಿವೆಗಳನ್ನು ತೋರಿಸಿದೊಡನೆ, “ ಅಯ್ಯಯ್ಯೋ, ನಾಮ್ಮದ್ರೇಯವ್ವಾ ಮಗಾ.... " ಎಂದು ಚೀರುತ್ತಲೇ ಗೋವಿಂದನ ಇಬ್ಬದಿಗಳಿಂದಲೂ ಟಣ್ಣನೆ ಜಿಗಿದು ಭಾಂವಿಯ ಬಳಿ ಓಡಿದರು. ಗೋವಿಂದನು ಅವರ ಚೀತ್ಕಾರವನ್ನು ಕೇಳಿ ಬೆಚ್ಚಿ ಬಿದ್ದು ನಿದ್ರೆಯೊಳಗಿಂದ ದಿಗ್ಗನೆದ್ದು ತಮ್ಮವ್ವನ ಬಳಿಗೆ ಬಂದು " ಅವ್ವಾ, ಮೈಯಲ್ಲಾ ನಡಗ ಹೆದರಿಕಿಯಾಗತದ."