ವಿಷಯಕ್ಕೆ ಹೋಗು

ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ನನ್ನನ್ನು ನೋಡಲಿಕ್ಕೆ ಬಂದಾಗ-
೫೯

ಅವರು:-ಅಲ್ಲದೆ ಒಂದು ಕಾಲು ಕುಂಟಿರಬೇಕೆಂದು ನಿನ್ನೆ ನಡಿಗೆಯ ಮೇಲಿಂದಲೇ ನನಗನಿಸಿತು.

(ಅವ್ವಯ್ಯಾ, ಇದೇನು ? ನಾನು ಕುಂಟಿಯೂ ಆದೆನೆ ? ಎಲ್ಲಿ, ಎರಡೂಕಾಲು ಚೆನ್ನಾಗಿರುವವಲ್ಲ? ಏನು ನನ್ನ ಹಣೆಬರಹವಾಯಿತಿದು?)

ಅವರು:-ಕೂದಲು ಬಿರುಸಾಗಿಯೂ ದಪ್ಪವಾಗಿಯೂ ಕಂಡವು.

(ಆ ! ನನ್ನ ಕೂದಲು ದಪ್ಪೇ? ಕಳೆದ ವರುಷ ಕಟ್ಟಿನ ಜ್ವರದಿಂದ ಬಿದ್ದಿದ್ದೆ, ಸತ್ತು ಸತ್ತು ಉಳಿದಿದ್ದೆ-ಪುನಃ ತಾಯಿಯ ಹೊಟ್ಟೆಯಿಂದ ಹುಟ್ಟಿ ಬಂದಂತಾಯಿತು. ಆಗ ಕೂದಲು ಉದುರಿದವು. ಮೊದಲು ಮೊದಲು ಸ್ವಲ್ಪ ಬಿರುಸು ಇದ್ದವು. ಈಗಂತೂ ಬಹಳ ಮೆತ್ತಗಾಗಿವೆ. ರೇಶಿಮೆಯನ್ನು ಸಹ ನಾಚಿಸುವಷ್ಟು ಮಿದುವಾಗಿದ್ದ ಈಗಿನ ನನ್ನ ಕೂದಲು ಬಿರುಸಂತೆ ! ದಪ್ಪವಂತೆ !! ಬೇಡವೇ ಬೇಡ; ಇಂಥಾ ಪರಿಯಿಂದ ಈ ಮಹಾರಾಯನನ್ನು ನಾನು ಮದುವೆಯಾಗಲೇ ಒಲ್ಲೆನು. )

ಅವರು:-ಬುದ್ಧಿಯೇನೊ ಚುರುಕು ಕಾಣುವದು.

(ಓಹೋ ನನ್ನ ಬುದ್ಧಿ ಮಾತ್ರ ಚುರುಕು ಎಂದಷ್ಟು ಒಪ್ಪುವನೆ? ನನ್ನನ್ನು ಹೊಗಳುತ್ತಿದ್ದವನಂತೇನೋ ಸುಮ್ಮನೇ ನಡೆಸಿದ್ದಾನಷ್ಟೆ!)

ಭಾವನವರು:-ಅಹುದು, ಬುದ್ಧಿಯು ಬಹಳೇ ತೀಕ್ಷ್ಣವುಂಟು.

ಅವರು:-ಧ್ವನಿಯೊಂದು ನನ್ನ ಮನಸಿಗೆ ಬಂದಿತು; ಬಾಯಿ ತೆಗೆದರೆ ಹುಲಿಯು ಗುಡುಗುಹಾಕಿದಂತಾಗುವದು

(ಏನು, ನನ್ನ ಧ್ವನಿಯು ಹುಲಿಯ ಗರ್ಜನೆಯಂತಿದೆಯೆ? ಅಷ್ಟು ಕರ್ಕಶವೆ ? ಆಗಲಿ-ನನ್ನ ಧ್ವನಿಯು ಕರ್ಕಶವೇ ಆಗಲಿ, ಹೇಗೇ ಇರಲಿ; ಮತ್ತೆ ನಿನ್ನೆ, ಬರೀ ನನ್ನ ಓದಿನ ಮೇಲಿಂದಲೇ ನನ್ನ ಧ್ವನಿಯನ್ನು ಗುರುತಿಸಿ, ಅದು ಬಹಳೇ ಇಂಪಿರಬೇಕೆಂತಲೂ,