ಹಡೆದ ತಾಯಿತಂದೆಗಳು ತಮ್ಮ ಕಂದವ್ವನಿಗೆ ಹುಚ್ಚು ಹಿಡಿಸುವ ಮಾತನ್ನು ಕಾನೂನು ಎಂದಿಗಾದರೂ ಒಪ್ಪೀತೇ ? "ಏನೂ ಸಂಬಂಧವಿಲ್ಲದ ನಾಯಕನು ಅವಳ ದುಡ್ಡನ್ನು ಅಪಹರಿಸಲಿಕ್ಕೆಂದು ಅವಳನ್ನು ನಮ್ಮಲ್ಲಿಗೆ ಕರೆದುಕೊಂಡು ತಂದು, ಏನನ್ನೊ ಮದ್ದು ಮಾಡಿ, ನಮ್ಮ ಮೇಲೆ ಅಪಕೀರ್ತಿ ತಂದು, ತಾನು ಪಾರಾಗಬೇಕೆಂದು ಮಾಡಿದ್ದಾನೆ” ಎಂಬ ಅವಳ ತಾಯಿತಂದೆಗಳ ಪುರಾವೆಗೆನೇ ಪುಟ ಸಿಕ್ಕು, ರಾಯರ ಮೇಲೆಯೆ ಖಟ್ಟಿಯು ತಿರುಗುಪ್ಪಾಗಿ, ಐನೂರು ರೂಪಾಯಿ ದಂಡ, ಆರು ತಿಂಗಳ ಸಶ್ರಮಶಿಕ್ಷೆಯಾಯಿತು.
"ಆತೂ, ಇದೊಂದು ನನ್ನ ಚಂದ್ರಾನ ಕಟ್ಟ ಕಡೀ ರಿಣಾ !! ” ಎಂದು ದಂಡವನ್ನು ಬಡಿದು, ನಾಯಕರು ಅವಳ ಮುಖ ನೋಡಿ ಅತ್ತು ಕರೆದು, ಜೇಲಿನ ದಾರಿ ಹಿಡಿದರು.
ಮುಂದೆರಡು ದಿವಸಗಳ ತರುವಾಯ ಅವ್ವನವರು ಬಂದು ಚಂದ್ರಿಯ ಮರುಗನ್ನು ನೋಡಿ ಕಣ್ಣೀರಿಟ್ಟು ಹೋದರು. ಹೋಗುವಾಗ ಏನೋ ಒಂದು ಮಾತು ಕೇಳಬೇಕೆಂಬಾಸೆಯಿಂದ "ಬಾ ಚಂದ್ರಾ, ನಮ್ಮೂರಿಗೆ, ನಾ ನಿನಗ ಮತ್ತ ಬೇಕಾದಷ್ಟು ಗಂಟು ಕೊಡತೇನಿ " ಎಂದರು.
ಆಗವಳು “ಬ್ಯಾಡ್ರೆವ್ವಾ, ನನ್ನ ಗಂಟು ನನ್ನ ಹತಿಲೆನ ಅದ....ಇಕಾ ನೋಡ್ರಿ ” ಎನ್ನುತ್ತ ಒಂದು ಬುಟ್ಟಿ ಯ ತುಂಬ ಆಗುವಷ್ಟು ರೂಪಾಯಿಯಷ್ಟು ಆಕಾರದ ಕಟೆದು ಇಟ್ಟು ಕೊಂಡ ತನ್ನ ಹಂಚಿನ ಹಲಸೆಯ ಗಂಟನ್ನು ತೋರಿಸಿದಳು.
ಮರುದಿವಸ ಚಂದ್ರವ್ವನನ್ನು "ಹುಚ್ಚು ಹಿಡಿದವಳೆಂ"ದು ಅವಳ ತಾಯಿತಂದೆಗಳು ಮನೆಬಿಟ್ಟು ಹೊರಕ್ಕೆ ಹಾ ಕಿ ದ ರು. ಊರೊಳಗೆ ಜನರು ಮನಬಂದಂತೆ ಆಡಿಕೊಳ್ಳಹತ್ತಿದರು. ಯಾರೆಂದರು, ತಾಯಿತಂದೆಗಳೇ ಅವಳನ್ನು ಈ ಪಾಡು ಮಾಡಿದ-ರೆಂದು! ಯಾರೆಂದರು, ಹಡೆದ ತಾಯಿತಂದೆಗಳಿಂದ ಇಂತಹ