ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೮೪

ಹೂಬಿಸಿಲು

ಹೆಸರಲ್ಲಿ ಭಕ್ತರು ಅವರಿಗೆ ಕೊಟ್ಟ ಹಡ್ಡಲಿಗೆಯ ದಕ್ಷಿಣೆಯನ್ನು ಹಾಗೆಯೆ ಸಂಗ್ರಹಿಸಿಕೊಂಡು ಅಮಾವಾಸ್ಯೆಗೆ ಊರಿಗೆ ಹಿಂತಿರುಗುತ್ತಾರೆ. ಹೀಗೆಷ್ಟೋ ಜನ ಜೋಗಿತಿಯರು ದೇವಿಯ ಹೆಸರಲ್ಲಿ ಬಿಟ್ಟು ಕೊಂಡವರು, ಅಲ್ಲಿಗೆ ಹೋಗಿ ರೊಕ್ಕ ಮಾಡಿಕೊಂಡು ಬರುವರು.

ನಮ್ಮೂರ ಅಗಸೆಯ ಛಾವಣಿಯಲ್ಲಿರುವ ದ್ಯಾಂವಕ್ಕ (ದೇವಕಿ) ನೂ ಈ ದೇವಿಯ ಹೆಸರಲ್ಲಿ ಜೋಗಿತಿ, ಜಾತಿಯಿಂದ ಬೇಡರವಳಾಗಿದ್ದರೂ ದ್ಯಾಂವಕ್ಕ ಬಲು ವಿಚಾರವಂತಳು. ಪ್ರಾಯದವಳಿದ್ದಾಗ ನಮ್ಮೂರ ಗೌಡರ ರೈತನಾದ ನಿಂಗನೊಂದಿಗೆ ಬಾಳುವೆಮಾಡಿ ಕೆಲ ವರುಷ ಸುಖವಾಗಿದ್ದಳಂತೆ. ಮುಂದೆ ಅವನಿಗೆ ಕುಡಿಯುವ ಚಟ ಹತ್ತಿತೆಂದು, ಒಂದು ದಿನ ಕದನವಾಗಿ, ತನ್ನ ಮನೆಗೆ ಕಾಲಿಕ್ಕಾ ಕೂಡದೆಂದು ಅವನಿಗೆ ಕಟ್ಟಪ್ಪಣೆ ಮಾಡಿದಳಂತೆ. ಆಗವಳಿಗೆ ವಯಸ್ಸು ಸುಮಾರು ಇಪ್ಪತ್ತೆರಡು. ಒಂದೇ ಒಂದು ನಾಲೈದು ವರುಷದ ಮಗುವಿನ ತಾಯಿ. ನಿಂಗನು ಅವಳಿಗೆ "ನೋಡ ಹಾಂ ದ್ಯಾಂವಿ, ನಂಗ ಹೊರಗ ಹಾಕಾಕ್ಷ, ಬಾಳ ಜ್ವಾಕೀ ಅಂದೆ! ಮತ್ತೆ ಮೂರ ದಿಂದಾಗ ಹೊಟ್ಟೆಗಿಲ್ಲಾ... ಆ ನನ್ ಧಣಿ ಅಂತ ಕರಿಗಿರ್ಯಾಕ ಬಂದಿ........ ನಾಯೇನ ಆಗ....ಬ-ಬರಾಕಿಲ್ಲಾ. ಕುಡಿದ ಗಂಡ್ಮಿನ ತೆಪ್ಪ ತೆಗೀತಿದ್ಯಾ ಚಲವೇ? ನೋ-ನೋ-ನೋಡು, ಬಲು ಹುಶಾರೀ- ಅಂದೆ !" ಆಗ ದ್ಯಾಂವಕ್ಕ-ಭೀ ಏಳ ಗಂಡೇ ! ನಾನ್ ಬೆದರ್ ಸಾಕ ಬರ್ತೀಯಾ? ಏನ್ ನಿನ್ನ ಸಂಗಾಟ ಇದ್ರೂ ನನ್ ರಟ್ಟ ಮುರಿದು ಒಂದ ರೊಟ್ಟಿ ನಾ ತಿನ್ನೂದ ನನಗೇನ ಬಿಟ್ಟಿಲ್ಲಾ. ಹ್ಯಾಂಗೂ ಬ್ಯಾಡರ ಮೂಲ್ಯಾಗಿ ಹುಟ್ಟಿ ಬಂದೇನಿ, ದುಡದಕ್ಯಾರಾತಿಂತೇನಿ. ನಿನ್ನ ಹೆಸರ್ಲೆ ಒಂದ್ಮಗಾ ಆಗೇತಿ. ಅದನ್ನs ಉಣಿಸಿ ತಿನಿಸಿ-ಬೆಳೆಸಿಗೊಂಡಕ್ಕಾರಾ ಇದ್ದೀನಿ. ಟ್ಯಾಗ ಬಲಾ ಇರೋತನಕಾ ಕೈಯಾಗ ನಾಕ ತೊಕ್ಕಾ ಮಾಡಿಕೊಂಡ, ಮಗ್ಗ ಆಟ ಇದ್ಯೇವ ಕಲಿಸಿ, ಮುಪ್ಪಿನ್ಯಾಗ ಸುಕಾ ಉಣ್ತೇನಿ.”