________________
18
ಗಿರೀಶನೂ ಅದೇ ರೀತಿ ತನ್ನ ದೃಷ್ಟಿಯನ್ನು ಹರಿಸಿ ಮತ್ತೆ ತನ್ನ ಸಾಮಾನುಗಳ ಕಡೆಗೆ ಹೊರಳಿಸಿದ ನು, ' ಸ್ಕೂಟ್ಕೇಸು', ಹಣ್ಣಿನ ಬುಟ್ಟಿ, ನೀರಿನ ಕೋಜಾಗಳನ್ನು ಒಂದು ಬದಿಗಿರಿಸಿ ' ಹೋಲ್ಕಾಲನ್ನು ಖಾಲಿ ಇದ್ದ ಬರ್ತಿ'ನ ಮೇಲಿಟ್ಟುಕೊಂಡು ಬಿಚ್ಚಿ, ಹಾಸಿಗೆ ಹಾಸಿ ಕೊಂಡು ಕುಳಿತು ಮತ್ತೊಮ್ಮೆ ತನ್ನ ಸಹ ಪ್ರಯಾಣಿಕರ ಕಡೆ ನೋಡಿದ, ತರುಣಿಯು ಮೊದಲು ತನ್ನ ಕಡೆಗೆ ದೃಷ್ಟಿ ಬೀರಿದ್ದಾಗಲೇ, ಆಕೆಗೆ ತಾ ನಲ್ಲಿ ನುಗ್ಗಿದ್ದರಿಂದ ಅಸಮಾಧಾನವುಂಟಾಯಿತೆಂಬ ಸೂಚನೆಯನ್ನು ಆಕೆಯ ಮುಖಭಾವದಿಂದಲೇ ತಿಳಿದುಕೊಳ್ಳುವಷ್ಟು ಸೂಕ್ಷ್ಮಬುದ್ದಿ ಗಿರೀಶನಿಗಿತ್ತು. ಆದರೆ ಆ ಅಸಮಾಧಾನದಿಂದ ಆವನಿಗೂ ಸ್ವಲ್ಪ ಒಳಗೇ ರೇಗಿತು. ಅವರು ಅಲ್ಲಿ ಕೂಡಲು ಎಷ್ಟು ಬಾ - ರೋ ಅಷ್ಟೇ ತಾನೂ ಬಾಧ್ಯನೆಂದುಕೊಂಡೇ ಆ ವ ನು ಮತ್ತೊಮ್ಮೆ ಅವರಕಡೆ ನೋಡಿದ್ದು, ತರುಣಿಯು ತನ್ನ ಮುಖವನ್ನು ಕಿಟಕಿಯ ಕಡೆ ತಿರುಗಿಸಿಕೊಂಡು ಹೊರಗಿನ ಗಿಡಮರಗಳನ್ನು ನೋಡು ತಿದ್ದಳು. ಆಕೆಯೊಂದಿಗಿದ್ದ ತರುಣನು ಗಿರೀಶನು ಮಾಡುತ್ತಿದ್ದುದ ನೆಲ್ಲ ನೋಡುತ್ತಿದ್ದನು. ಗಿರೀಶನು ಕುಳಿತು ತನ್ನ ಕಡೆ ದೃಷ್ಟಿ ಬೀರು ತಲೇ ಆತನು ಸ್ವಲ್ಪ ಹುಸಿನಗೆ ಬೀರಿ, 'ಎಲ್ಲಿಯವರೆಗೆ ನಿಮ್ಮ ಪ್ರಯಾಣ ?' ಎಂದು ಇಂಗ್ಲೀಷಿನಲ್ಲಿ ಸಂಭಾಷಣೆ ಆರಂಭಿಸಿದ.
“ ಬೊಂಬಾಯಿಯವರೆಗೆ ” ಎಂದು ಗಿರೀಶನು ಉತ್ತರಕೊಟ್ಟು, * ನೀವೆಲ್ಲಿಗೆ ಹೋಗುವಿರಿ ?” ಎಂದು ಕೇಳಿದ.
“ ನಾವೂ ಬೊಂಬಾಯಿಗೇ ಹೊರಟಿದ್ದೇವೆ.
“ ಓ! ಹಾಗಿದ್ದರೆ ನಾನು ನಿಮಗೀ ' ಬರ್ತ 'ನ್ನ ಸಂಜೆ ಗುಂತಕಲ್ ಸ್ಟೇಷನ್ನಿನಲ್ಲಿ ಖಾಲಿ ಮಾಡಿಕೊಡ್ತನೆ?? “ ಅದೇನು ಪರವಾಯಿಲ್ಲ. ನೀವೇನೂ ತೊಂದರೆ ತಕೋಬೇಡಿ.”