ಪುಟ:27-Ghuntigalalli.pdf/೧೮

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
೨೭ ಘಂಟೆಗಳಲ್ಲಿ
೧೫
 

"………ನನ್ನ ಹೆಂಡತಿಯೂ ಅಲ್ಲ."

"ಅದನ್ನು ನಾನಾಗಲೇ ಊಹಿಸಿದೆ."

"ನನ್ನ ಬಗ್ಗೆ ನೀವು ತಪ್ಪು ಅಭಿಪ್ರಾಯವಿಟ್ಟುಕೊಂಡಿದ್ದೀರಿ."

"ನಾನ್ಯಾವ ಅಭಿಪ್ರಾಯಾನೂ ವ್ಯಕ್ತಪಡಿಸಲಿಲ್ಲವಲ್ಲ? ಅದೂ ಅಲ್ಲದೆ ನಿಮ್ಮ ಗೊಡವೆ ನನಗೇಕೆ? ನೀವು ತಾನೇ ಇದನ್ನೆಲ್ಲ ನನಗೆ ಹೇಳಬೇಕಾದ ಪ್ರಮೇಯವೇನು?"

"ಹಾಗಲ್ಲ! ನಾನು ಯಾವುದೋ ಹುಡುಗೀನ ಅಪಹರಿಸಿ ಕೊಂಡು ಹೋಗ್ತಿದ್ದಿನೀಂತ ನೀವೆಲ್ಲಾದರೂ ಭಾವಿಸಿಕೊಂಡಿರೋ ಏನೋ೦ತ………"

"ಯಾರೇನು ಭಾವಿಸಿದರೆ ತಾನೇ ನಿಮಗೇನು ನಷ್ಟ."

"ಅದು ಸರಿ! ನನಗೇನೂ ಅವರಿಂದ ನಷ್ಟವಿಲ್ಲ. ಆದರೆ ಈ ಹುಡುಗಿ ನನ್ನ ಕುತ್ತಿಗೆಗೆ ಒಂದು ಹೊರಳುಕಲ್ಲು ಗಂಟುಬಿದ್ದ ಹಾಗೆ ಬಿದ್ದಿದ್ದಾಳೆ. ಊರೂರು ಸುತ್ತೋ ನಿಮಗೆ ನಾನೇನು ಹೇಳಬೇಕಾಗಿಲ್ಲವಲ್ಲ, ನಿಮಗೆ ಯಾವಳಾದರೊಬ್ಬ ಹುಡುಗಿ ಕಣ್ಣಿಗೆ ಬೀಳ್ತಾಳೆ; ಅವಳಿಗೂ ನಿಮ್ಮ ಮೇಲೆ ಮನಸ್ಸು ಬೀಳುತ್ತೆ; ನೀವೂ ಅವಳನ್ನ 'ಲೈಕ್' ಮಾಡ್ತೀರಿ, ಅದರಿಂದ ಒಂದು 'ಟೆಂಪರರಿ ಫ್ರೆಂಡ್‌ಷಿಪ್' ಬೆಳೆಯುತ್ತೆ. ಆದರದು ಬೈಂಡಿಂಗ್' ಆಗೊಲ್ಲ. ಹಾಗೆ ಇದೊಂದು ನನ್ನ ಅನುಭವ. ಅವಳನ್ನ ಮದುವೆ ಮಾಡಿಕೊಳ್ಳಬೇಕಂತೆ. ಅದು ನನ್ನಿಂದ ಅಸಾಧ್ಯ."

"ಇದನ್ನೆಲ್ಲಾ ನನಗೇಕೆ ಹೇಳೀರಿ? ನಿಮ್ಮ ಸಂಬಂಧ, ಅಥವಾ ನಿಮ್ಮ ಕಷ್ಟ-ನಿಷ್ಠೂರಗಳನ್ನು ಕಟ್ಟಿಕೊಂಡು ನನಗೇನಾಗಬೇಕಾಗಿದೆ?"

'ನಿಮ್ಮಿಂದ ನನಗೊಂದುಪಕಾರವಾಗಬೇಕಿದೆ. ಅದರಿ೦ದ ಇಷ್ಟೆಲ್ಲ………"