ಪುಟ:27-Ghuntigalalli.pdf/೨೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


________________

೨೫

೩೬ ಘಂಟೆಗಳಲ್ಲಿ

ಹಿಡಿದು ಆ ತೊಂದರೆಯನ್ನು ನಿವಾರಿಸಿಕೊಳ್ಳಲು ದೀಪ ಹಚ್ಚಿದಳು. ಬಾಗಿಲಮೇಲುಗಡೆ ಆವಳ ಕೈಗೆ ನಿಲುಕದಷ್ಟು ಎತ್ತರದಲ್ಲಿ ಒಂದು ಚಿಲಕವು ಹಾಕಲ್ಪಟ್ಟಿತ್ತು. ಅದನ್ನು ತೆಗೆಯಬೇಕೆಂದು ಯೋಚಿಸಿದಳು. ಆ ಚಿಲಕವನ್ನು ತೆಗೆಯಲು ಗಿರೀಶನು ಮಲಗಿದ್ದ ಬರ್ತಿನ ಮೇಲೆ ಹತ್ತಿ, ಪ್ರಯತ್ನಿಸಬೇಕಾಗಿದ್ದಿತು. ಆ ಪ್ರಯತ್ನದಲ್ಲಿ ಗಿರೀಶನಿಗೆಲ್ಲಿ ಎಚ್ಚರಿಕೆಯಾಗುವುದೋ ಎಂಬ ಭೀತಿ ಬೇರೆ ಇತ್ತು. ಅದರ ಮೇಲೆ ಸದ್ದಿಲ್ಲದೆ ಪ್ರಯತ್ನಿಸಲು ನಿರ್ಧರಿಸಿದಳು. ಆದರೆ ಆ ಪ್ರಯತ್ನದಲ್ಲಿ ದ್ದಾಗ ಗಿರೀಶನ ನಿಟ್ಟುಸಿರು ಕೇಳಿ ತಟಕ್ಕನೆ ದೀಪ ಆರಿಸಿಬಿಟ್ಟಳು. ಒಂದು ಕ್ಷಣ ಕಳೆಯಲು, ಚಿಲಕ ತೆಗೆಯುವ ಹವ್ಯಾಸವನ್ನು ಬಿಟ್ಟು ಬೇರೆ ಪ್ರಯತ್ನ ಕೈ ತೊಡಗಿದಳು, ಗಿರೀಶನು ಬಹಳ ಹೊತ್ತು ಕಾಯಲಾರದೆ ಮೆಲ್ಲನೆ ಮುಸುಕನ್ನು ತೆಗೆದು ತಲೆಯನ್ನು ಹೊರಳಿಸಿ, ತಲೆಯಕಡೆಯಿದ್ದ ಬಾಗಿಲಿನ ಕಡೆ ನೋಡಿದನು. ನೋಡಿದ್ದೆ ತಡ ಹೊದ್ದಿದ್ದ ಶಾಲನ್ನು ಕಾಲಿಂದೊದ್ದು ಕೊಂಡದ್ದು ಒಂದೇ ಹಾಂಗೆ ಹಾರಿ ಶಶಿಯ ಜಡೆ ಹಿಡಿದು ಒಂದು ಕೈಗೆ ಸುತ್ತಿಕೊಂಡು ಕಿಟಕಿಯಿಂದಾಚೆ ಮುಕ್ಕಾಲುಭಾಗ ಹೊರಬಿದ್ದಿದ್ದ ಆವಳ ದೇಹವನ್ನು ಮತ್ತೊಂದು ಕೈಯಿಂದ ದರದರನೆ ಎಳೆದು ಕೊಂಡೆತ್ತಿ ತಂದು, ಅವಳ ಹಾಸಿಗೆಯ ಮೇಲೆ ಅವಳನ್ನು ಉರುಳಿಸಿ ದೀಪಹಚ್ಚಿ, “ ಏನು ಈ ಹುಚ್ಚಾಟದ ಅರ್ಧ ? ” ಎಂದು ವ್ಯಗ್ರನಾಗಿ ಕೇಳಿದನು. ನನ್ನಿಷ್ಟ ಬಂದಹಾಗೆ ನಾನು ಮಾಡಿಕೊಳೇನೆ. ಮಧ್ಯೆ ತಲೆಹಾಕಿಕೊಂಡು ಬರೋಕೆ ನೀವ್ಯಾರು ?” ಎಂದು ಶಶಿಯು ಕೆರಳಿ ಎದ್ದು ಕುಳಿತಳು. " ನಾನ್ಯಾರಾದರೂ ಆ ಗಲಿ; ನಿನ್ನಿಷ್ಟ ಬಂದಹಾಗೆ ನೀನು ಧಾರಾಳವಾಗಿ ಮಾಡಿಕೊಳ್ಳಬಹುದು. ಆದರೆ ನಾನೇನು ನಿನಗೆ.