ಆಹ್ವಾನ
ನಿರೂಪಕ:
ಮೂಲಭೂತ ಘನ ಕೈಗಾರಿಕೋದ್ಯಮಗಳ ಜತೆಗೆ ಗ್ರಾಮಿಾಣ ಗುಡಿ ಕೈಗಾರಿಕೆಗಳಿಗೂ ಒಂದು ಸ್ಥಾನ.
ಪುರುಷ ಪತ್ರಿಕೋದ್ಯೋಗಿ :
ಮದರಾಸಿನಲ್ಲಿ ಅಖಂಡ ರೈಲುಡಬ್ಬಿಗಳನ್ನು ತಯಾರಿಸುವ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಗೆ, ಐದುವರ್ಷಗಳ ಗುರಿಯನ್ನು ಮೂರೇ ವರ್ಷಗಳಲ್ಲಿ ಸಾಧಿಸಿದ ಹಿರಿಮೆಯಿದೆ.
ಸ್ತ್ರೀಕಂಠ :
ಯಾಕಯ್ಯ ಇಷ್ಟೊಂದು ನೀರು ಹಾಕ್ತೀಯಾ ಹಾಲಿಗೆ? ದಿನಾ ಇದೇ ಗೋಳು. ಸಾಕಪ್ಪಾ, ಸಾಕು!
ಸ್ತ್ರೀ ಪತ್ರಿಕೋದ್ಯೋಗಿ :
ಮುಂಬಯಿಯ ಆರೇ ಮಿಲ್ಕ್ ಕಾಲನಿ, ಇಡೀ ನಗರದ ಅರ್ಧ ಜನಸಂಖ್ಯೆಗೆ ಸಾಲುವಷ್ಟು ಒಳ್ಳೆಯ ಹಾಲನ್ನು ಪೂರೈಸುತ್ತಿದೆ.
ಪುರುಷ ಪತ್ರಿಕೋದ್ಯೋಗಿ :
ಚಿತ್ತರಂಜನ ಕಾರಖಾನೆಯ ರೈಲು ಎಂಜಿನುಗಳು,ಯಾವದೇಶವಾದರೂ ಹೆಮ್ಮೆ ಪಡುವಂಥವಾಗಿವೆ.
ಸ್ತ್ರೀ ಪತ್ರಿಕೋದ್ಯೋಗಿ :
ಮುಂಬಯಿಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆ, ಪುಣೆಯ ರಾಸಾಯನಿಕ ಸಂಶೋಧನಾ ಸಂಸ್ಥೆ,ಪಿಂಪ್ರಿಯ ಪೆನಿಸಿಲಿನ್ ಕಾರಖಾನೆ_ ಇವೆಲ್ಲಾ, ಸರಿಯಾದ ದಿಕ್ಕಿನಲ್ಲಿ ಇಡಲಾಗಿರುವ ದೃಢ ಹೆಜ್ಜೆಗಳು.
ಪುರುಷ ಪತ್ರಿಕೋದ್ಯೋಗಿ :
ಬೆಂಗಳೂರಿನ ಹಿಂದೂಸ್ಥಾನ ವಿಮಾನ ಕಾರಖಾನೆ, ಸೂಪರ್ ಸಾನಿಕ್- ಧ್ವನಿವೇಗದ-ವಿಮಾನವನ್ನು ನಿರ್ಮಿಸಿದೆ.
ನಿರೂಪಕ :
ರಾಷ್ಟ್ರರಕ್ಷಣೆಯ ಮಾರ್ಗದಲ್ಲಿ ಈ ಆಕಾಶಹರಿಣಿಯೊಂದು ಹೆಗುರುತು.
————
೬೩