ಪುಟ:Abhaya.pdf/೧೨೨

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ಜಲಜೆಯೇ ಈ ಮಾತನ್ನಾಡಿದಳೆಂಬುದನ್ನು ನಂಬುವುದೇ ಸಾಧ್ಯವಾಗದೆ ತುಂಗಮ್ಮ ಸಿಳಿಸಿಳಿ ಕಣ್ಣು ಬಿಟ್ಟಳು. ಜಲಜ ಆಕೆಯ ಸಮಾಪಕ್ಕೆ ಬಂದಳು

"ನೀನೂ ಸರಿ ತುಂಗಕ್ಕ! ನನಗಷ್ಟೂ ಗೊತಾಗಲ್ವೆ? ಹಸಿವಾಗಿತ್ತೇನೊ ಅದಕ್ಕೆ ಏನೂ ಸಿಗಲಿಲ್ಲ ಕೊಬರಿ ಎತ್ಕೊಂಡ್ಲು. ಹೊಡೆಯೋದು ನಿಲ್ಸೊಣ ಅಂತ್ಲೇ ನಾನಲ್ಲಿಗೆ ಹೋದ್ದು. ಆದರೆ ನನ್ನ ಓಡಿಸೇಬಿಟ್ರು!...."

ಜಲಜ ಕೆಟ್ಟವಳಾಗುವುದು ಸಾಧ್ಯವಿರಲಿಲ್ಲ, ಅದು ಮುಟ್ಟಿದರೆ ಮುದುಡುವೆ ಮೃದು ಹೃದಯ....

ತುಂಗಮ್ಮ, ಜಲಜೆಯ ಕೈ ಬೆರಳುಗಳನ್ನು ಮುಟ್ಟಿದಳು. ಅವುಗಳ ನ್ನೆತ್ತಿಕೊಂಡು ತನ್ನೆದೆಯ ಮೇಲಿರಿಸಿಕೊಂಡಳು.

ತುಂಗಮ್ಮನ ಪ್ರಿಯತಮನ ವಿಚಾರ ಕೇಳಿ, ಗೇಲಿ ಮಾಡುವ ಮಾತೊಂದು ಜಲಜೆಯ ನಾಲಿಗೆಯ ತುದಿವರೆಗೊ ಬಂತು,ಆದರೆ ತುಂಗಮ್ಮನ ಮನಸ್ಸು ನೋಯಒಹುದೆಂದು ತನ್ನ ನಾಲಿಗೆಯನ್ನಾಕೆ ಬಿಗಿ ಹಿಡಿದಳು

ಅಷ್ಟೇ ಅಲ್ಲ, ಮೂಗಿ ಕಲ್ಯಾಣಿ ತುಂಗಮ್ಮನಿಗೆಂದು ಊಟ ಬಡಿಸಿ ತಂದ ತಟ್ಟಿಯ ನೆನಪೊ ಆಯಿತು.

ಜಲಜ ತುಂಗಮ್ಮನ ಕಣ್ಣುಗಳನ್ನೇ ನೋಡುತ್ತ,"ಅಕ್ಕ-ಅಕ್ಕ" ಎಂದು ಮೂಕಸ್ವರ ಹೊರಡಿಸಿದಳು

ಸಂಜೆಯಾಯಿತು, ಕತ್ತಲಾಯಿತು ಮತ್ತೆ ಸಾಮೂಹಿಕ ಪ್ರಾರ್ಥನೆ.

ಆ ಬಳಿಕ ಊಟ.

ಜ್ವರದ ಮುಖವನ್ನೇ ಕಂಡರಿಯದಷ್ಟು ಚುರುಕಾದಳು ಜಲಜ, ತುಂಗಮ್ಮನ ಮತ್ತು ತನ್ನ ಹಾಸಿಗೆಗಳನ್ನು ಹಾಸುತ್ತಾ ಆಕೆ ಹೇಳಿದಳು:

"ನಾಳೆ ನಮ್ಮನ್ನ ವರ್ಗಾಯಿಸ್ತಾರೆ."

ಎಲ್ಲಿಗೆ-ಎಂದು ಕೇಳ ಬೇಕೆಂದಿದ್ದ ತುಂಗಮ್ಮ ಉತ್ತರ ಹೊಳೆದು ಸುಮ್ಮನಾದಳು. ಜಲಜ ಹಾಸಿಗೆಯ ಮೇಲೆ ಅಡ್ಡಾದಳು.

"ನಾಳೆ ಲಲಿತಾ ಪರಿಚಯ ಮಾಡ್ಕೊಡ್ತೀನಿ ತುಂಗಕ್ಕ. ಆಕೆ ನನ್ನ