ಪುಟ:Abhaya.pdf/೧೩೦

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ಸರಸಮ್ಮನ ಗಮನಕ್ಕೆ ಅದು ಬರದೇ ಹೋಗಲಿಲ್ಲ ಆ ಮೊದಲ ಪಂಗ್ತಿಯೂಟದಲ್ಲಿ ಹಲವರು ಹೊಸಬರಿಗಾಗುವ ಮನಸ್ಸಿನ ಸಂಕಟವೂ ಆಕೆಗೆ ವರಿಚಿತನಾಗಿತ್ತು. ಅವರು ತುಂಗಮ್ಮನ ಸಮೀಪಕ್ಕೆ ಬಂದರು.

"ಯಾಕೆ ತುಂಗಾ? ಅನ್ನ ಸೇರಲ್ವೆ?"

"ನೇರುತ್ತೆ ದೊಡ್ಡಮ್ಮ. ಹಸಿವಿಲ್ಲ, ಅದಕ್ಕೆ....."

"ನೀರು ಮಜ್ಜಿಗೆ ಬರತ್ತೆ. ಇನ್ನೊಂದು ತುತ್ತು ತಗೋ."

"ಹೂಂ..." ಪದ್ದಕ್ಕನ ಮದುವೆಯೂಟ... ಆಗ ನೂರಾರು ಜನ ನೆರೆದಿದ್ದರು. ಅವರೆಲ್ಲ ಸದ್ಗೃಹಸ್ಥ ಸದ್ಗೃಹಿಣಿಯರು ನಗೆಮಾತಿನ ಗದ್ದಲದಲ್ಲೆ ಆ ಊಟ ಮುಗಿದು ಹೋಗಿತ್ತು ಆಗಲೂ, ನೆರೆದಿದ್ದವರ ದೃಷ್ಟಿಯಲ್ಲಿ ಪದ್ದಕ್ಕ, ತಾನು ಮತ್ತು ತಮ್ಮ, ತಾಯಿಯಿಲ್ಲದ ತಬ್ಬಲಿಗಳು. ತಂದೆ ಬಡವರು ನಿಜ ಆದರೂ, ಮೊದಲ ಮಗಳ ಮದುವೆಯೆಂದು ಶಕ್ತಿ ಮೀರಿಯೆ ವೆಚ್ಚಮಾಡಿದ್ದರು ಊಟದಲ್ಲಿ ಯಾವುದಕ್ಕೂ ಕೊರತೆಯಾಗಿರಲಿಲ್ಲ.

ಅದಾಗ ಮೂರು ವರ್ಷಗಳ ಮೇಲೆ ತನ್ನ ಮದುವೆಯ ಚಿತ್ರವೂ ಅಸ್ಪಷ್ಟವಾಗಿ ತೋರಿಸಿಕೊಂಡಿತ್ತು. ಪದಕ್ಕನ ಮದುವೆಯಷ್ಟು ವಿಜ್ರಂಭಣೆಯಿಂದ ತನ್ನದು ನೆರವೇರುವುದು ಸಾಧ್ಯವಿರಲಿಲ್ಲ ಆದರೂ, ಬೇರೆ ಹೆಣ್ಣು ಮಕ್ಕಳಿಲ್ಲವೆಂಬ ಕಾರಣದಿಂದ, ತಂದೆ ಸಾಲವೆತ್ತಿಯಾದರೂ, ಅದಷ್ಟು ಹೆಚ್ಚು ಖರ್ಚು ಮಾಡಿಯೇ ಮಾಡುತಿದ್ದರು.. ನಾರಾಯಣಮೂರ್ತಿಗೆ ತನ್ನೆಲ್ಲವನ್ನೂ ತಾನು ಅರ್ಪಿಸಿದಮೇಲೆ, ಮದುವೆಯ ಮಂಟಪದ ಸಂಭ್ರಮವನ್ನೆಲ್ಲ ತಂಗಮ್ಮ ಕಲ್ಪಿಸಿಕೊಂಡಿದ್ದಳು.... ತನ್ನ ಮದುವೆಯ ಊಟ...

ಈಗ ಇಲ್ಲಿ ಕುಳಿತಿದ್ದಳಾಕೆ, ಅಭಯಧಾಮದ ನಿವಾಸಿಗಳೊಡನೆ. ದೊಡ್ಡಮ್ಮ ಹೇಳಿದ್ದರು: 'ಇವತ್ತು ನಮಗೆಲ್ಲಾ ಬಹಳ ಸಂತೋಷದ ದಿವಸ...' ದೊಡ್ದಮ್ಮ ಒಳ್ಳೆಯವರು ಆದರೆ ಹಾಗನ್ನಬಾರದಿತ್ತು. ಯಾಕೆ ಸಂತೋಷ? ಯಾಶಕ್ಕೋಸ್ಕರ?

ಅಥವಾ, ಅವರು ಹಾಗಂದುದೇ ಸರಿಯಾಗಿತ್ತೇನೋ ಕೆರೆ ಬಾವಿಯ ಪಾಲಾಗಬೇಕಾಗಿದ್ದವಳು, ಬೀದಿಗೆ ಬೀಳಬೇಕಾಗಿದ್ದವಳು, ಯಾವ ದೇವರ ದಯದಿಂದಲೋ ಅಭಯಧಾಮವನ್ನು ಬಂದು ಸೇರಿದ್ದಳಲ್ಲವೆ?