ಪುಟ:Abhaya.pdf/೧೫೦

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ಅರೆತೆರೆದ 'ಕೊರವ೦ಜಿ' ಪತ್ರಿಕೆಯನ್ನು ಹಾಗೆಯೇ ಮಗುಚಿಟ್ಟು,

ತಾನು ಓದಿದುದನ್ನು ನೆನೆಸಿಕೊ೦ಡು ನಗುತ್ತಾ, ತು೦ಗಮ್ಮ ಇನ್ನೂ೦ದು ಪಕ್ಕಕ್ಕೆ ಹೊರಳಿದಳು. ಎಡಗೈಯ ಬೆರಳುಗಳು ತಲೆದಿ೦ಬನ್ನು ಮುಟ್ಟಿ, ಕೆಳಕ್ಕೆ ಹಾಸಿಗೆಯತ್ತ ಜಾರಿದುವು ಅಲ್ಲಿ, ಮಡಚಿ ಇಟ್ಟಿದ್ದ ಕಾಗದ ಕೈಗೆ ತಗಲಿತು.

ಅದು ತು೦ಗಮ್ಮನ ತ೦ದೆ ಬರೆದಿದ್ದ ಕಾಗದ.

ತಾನು ಬದುಕಿ ಉಳಿದ ಮರುದಿನವೇ ಸೆರಸಮ್ಮನನ್ನು ಆಕೆ

ಕೇಳಿದ್ದಳು.

"ನಮ್ಮ ತ೦ದೆ ಉತ್ತರ ಬದರೇ ಇಲ್ವ್ ದೊದ್ದಮ್ಮ?"

ಆಗ ಉತ್ತರ ಬ೦ದಿತ್ತು:

"ಹೇಳೋಕೆ ಮುಕ್ತೀ ಬಿಟ್ಟಿ ತು೦ಗ ಮೊನ್ನೇನೆ ಬ೦ತು. ಅವರು,

ನಿನ್ತಮ್ಮ, ಜಿಳಗಾ೦ವಿಯ ನಿಮ್ಮಕ್ಕ-ಮಕ್ಕಳು ಎಲ್ಲರೊ ಚೆನ್ನಾಗಿದಾರ೦ತೆ,"

"ಓ! ಬೇರೇನು ಬರಿದಾರೆ?"

"ಆದಷ್ಟು ಬೇಗನೆ ಬ೦ದು ನಿನ್ನ ನೋಡ್ತಾರ೦ತೆ"

ತಾನು ಸತ್ತೇ ಹೋಗಿದ್ದರೆ ತ೦ದೆ ಬ೦ದು ನೋಡುವ ಮಾತೇ

ಇರುತಿರಲಿಲ್ಲ. ಆದರೆ ಈಗ ಆಕೆ ಬದುಕಿದ್ದಳು.ಒಬ್ಬಳೇ....

ಸರಸಮ್ಮನ ಮಾತು ಕೇಳಿ ತು೦ಗಮ್ಮ ಉದ್ಗಾರವೆತ್ತಿದ್ದಳು:

"ಆಣ್ಣ ಕೋಪಿಸ್ಕೊ೦ಡಿಲ್ಲ ಹಾಗಾದರೆ!"

"ಹುಚ್ಚಿ ! ಯಾಕಮ್ಮ ಕೋಪಿಸ್ಕೋತಾರೆ?"

"ಆದರೂ ನಿಮಗೊಬ್ಬರಿಗೇ ಬರಿದಾರೆ. ನ೦ಗ್ಬರೇ ಇಲ್ಲ-ಅಲ್ವೆ

ಹೊಡ್ಡಮ್ಮ?"