ಪುಟ:Abhaya.pdf/೧೬೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ


೧೫೯
ಅಭಯ

"ಲಲಿತಾ, ಸ್ವಲ್ಪ ಏಳ್ತೀನಮ್ಮ ನಾನು."

"ಹಿತ್ತಿಲ ಕಡೆಗೆ ಹೋಗ್ಬೇಕಾ ?"

"ಹೂಂ....ಎಲ್ಲಿ, ಸ್ವಲ್ಪ ಬಾ...."

ತುಂಗಮ್ಮ ಏಳಲು ಲಲಿತಾ ನೆರವಾದಳು ಎಷ್ಟೊಂದು ಹಗುರ

ವಾಗಿತ್ತು ತುಂಗಮ್ಮನ ದೇಹ!

ಹಿತ್ತಿಲು ಇರಲಿಲ್ಲ ಅಭಯಧಾಮಕ್ಕೆ. ಕಟ್ಟಡದೊಳಗೇ ಎಲ್ಲವೂ....

ಲಲಿತೆಯ ಭುಜಕ್ಕೆ ಆತುಕೊಂಡು ನಡೆಯುತ್ತಾ ತುಂಗಮ್ಮ,

ತನ್ನ ಅಂಗಾಂಗಗಳಿಗೆ ಶಕ್ತಿ ಬಂದು ತಾನೆಂದು ಓಡಿಯಾಡ ಬಲ್ಲೆನೋ ಎಂದುಕೊಂಡ‍ಳು.