ಪುಟ:Abhaya.pdf/೧೬೫

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ
೧೦

ಮತ್ತೆ ಹತ್ತು ದಿನಗಳಲ್ಲೆ ತುಂಗಮ್ಮನ ಅಂಗಾಂಗಗಳಿಗೆ ಶಕ್ತಿ ಬಂದು ಆಕೆ ಓಡಿಯಾಡಲು ಸಮರ್ಥಳಾದಳು. ಹಾಗೆ ಚೇತರಿಸಿಕೊಂಡ ತುಂಗಮ್ಮ ಸೊರಗಿದ್ದರೂ ಮುದ್ದಾಗಿದ್ದಳು ನೋಡಲು.

ತುಂಗಮ್ಮನ ಆರೈಕೆ ಚೆನ್ನಾಗಿ ನಡೆಯಬೇಕು ಎಂದಿದ್ದರು ಡಾಕ್ಟರು.

ಆ ವೈದ್ಯಕೀಯ ಸಲಹೆ ಸರಸಮ್ಮನಿಗೆ ಚಿಂತೆಗೆ ಕಾರಣಕವಾಗಿತ್ತು. ಅಭಯ ಧಾಮದ ಆಯವ್ಯಯದ ಆಂದಾಜುಪಟ್ಟೆಯಲ್ಲಿ ಒಳ್ಳೆಯ ಆರೈಕೆಗೆ ಬೇಕಾದ ಹಣ ಎಂದೂ ಮಿಸಲಾಗಿರಲಿಲ್ಲ. ಸಾಮಾನ್ಯವಾಗಿ ಅಂತಹ ಸಂದರ್ಭಗಳಲ್ಲಿ ಸರಸಮ್ಮ, ತಿಂಗಳಿಗೆ ತಮಗೆ ಬರುತಿದ್ದ ಎಂಭತ್ತು ರೂಪಾಯಿ ಗೌರವ ಧನದಲ್ಲೇ ವೆಚ್ಚ ಮಾಡಬೇಕಾಗುತಿತ್ತು. ವೆಚ್ಚಮಾಡಲು ಅವರು ಹಿಂಜರಿಯುತಿದ್ದರೆಂದಲ್ಲ. ಆದರೆ ಪುಷ್ಟಕರನಾದ ಹಣ್ಣು ಹಾಲು ಔಷಧಿ ಒದಗಿಸಲು ಆ ವೆಚ್ಚವೂ ಸಾಲುತ್ತಿರಲಿಲ್ಲ...ಅನಿವಾರ್ಯವಾಗಿ, ತುಂಗಮ್ಮ, ನನ್ನು ಹೆರಿಗೆಗಾಗೆ ಆಸ್ಫತ್ರೆಗೆ ಸೇರಿಸುವುದು ಸಾಧ್ಯವಾಗಿರಲಿಲ್ಲ. ನೇರಿಸಿದ್ದರೆ, ತುಂಗಮ್ಮನ ಅವೇಕ್ಷೆಗೆಜ್ ಇದಿರಾಗಿಯಾದರೂ ಸರಿಯೆ ಸೇರಿಸಿದ್ದರೆ, ಮಗು ವನ್ನುಳಿಸುವುದು ಸಾಧ್ಯವಾಗುತಿತ್ತೋ ಏನೋ. ಸರಸಮ್ಮನ ಮನಸ್ಸಿನಲ್ಲಿ ಹಾಗೆ ಮೂಡಿದ ಶಂಕೆ ಬಲವಾಗಿ ಬೇರೊರಿ ಬಿಟ್ಟಿತ್ತು. ಹೀಗಾಗಿ, ತುಂಗಮ್ಮ ನಿಗೆ ಎಷ್ಟು ಆರೈಕೆ ಮಾಡಿದರೂ ಆಕೆಗೆ ತೃಪ್ತಿ ಇರಲಿಲ್ಲ.

ಸರಸಮ್ಮನ ನಿರೀಕ್ಷೆಗಿಂತ ಮುಂಚಿತವಾಗಿಯೇ ತುಂಗಮ್ಮ ಹಾಸಿಗೆ

ಬಿಟ್ಟು ಎದ್ದಳು. ಆಕೆಯ ಹಸನ್ಮುಖ-ಚ್ಟುವಟಿಕೆಗ‍ಳನ್ನು ಕಂಡು ಸರಸಮ್ಮನಿಗೆಷ್ಟೋ ಸಮಾಧಾನವಾಯಿತು.

ಅವರು ಮಕ್ಕಳನ್ನು ಪ್ರೀತಿಸುತಿದ್ದರು. ಆದು ಅಲ್ಲಿ ಎಲ್ಲರಿಗೂ ತಿಳಿದಿದ್ದ

ಬಹಿರಂಗ ವಿಷಯವಾಗಿತ್ತು. ಆದರೂ ತುಂಗಮ್ಮನ ವಿಷಯದಲ್ಲಿ ಯೋಚಿ ಸುತ್ತ ಅವರಿಗನಿಸುತಿತ್ತು: