ಪುಟ:Abhaya.pdf/೧೯೬

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

ಅಭಯ ೧೯೧

ಮನಸಿನೊಳಗೆ ಆ ಗೊಂದಲವಿದ್ದುದು ಒಂದೆರಡು ನಿಮಿಷ ಮಾತ್ರ. ತಾವೇನನ್ನೂ ಆ ಹಣದಿಂದ ತೆಗೆದುಕೊಳ್ಳಕೂಡದೆಂದೇ ಅವರು ನಿರ್ಧರಿ ಸಿದರು.

“ಇದು ನೀವು ಅಭಯಧಾಮಕ್ಕೆ ಕೊಡೋ ಮೊದಲ್ನೇ ಕಾಣಿಕೆ ಮತ್ತು ಕೊನೇ ಕಾಣಿಕೆ, ಅಲ್ವೆ ?” “ಯಾಕೆ ?”

“ಇನ್ನೇನು ? ತುಂಗ ಇನ್ನು ಇಲ್ಲಿ ಅನಾಥೆಯಾಗಿ ಇರೋದಿಲ್ಲ. ಸಮಿತಿಯವರು ಒಪ್ಪಿದ್ಮೇಲೆ ಆಕೆ ಸ್ಟಾಫಿನವಳಾಗ್ತಾಳೆ-ಉಪಾಧ್ಯಾಯಿನಿ ಎಂತಲೋ, ನಿನಗೆ ಸಹಾಯಕಿ ಎಂತಲೋ ಆ ಮೇಲೆ ಆಕೇನೆ ಸಂವಾದಿ ಸ್ತಾಳೆ ... ಏನಮ್ಮ ತುಂಗ ?”

ಬದುಕು ನಿರಾಶಾಮಯವೆಂದು ಯಾವ ಕಾಲದಲ್ಲಿಯೂ ತೋರಿಯೇ ಇರಲಿಲ್ಲವೇನೊ ಎಂಬ ಭ್ರಮೆ ಹುಟ್ಟಿಸುವಷ್ಟು ಸಮರ್ಥವಾಗಿದ್ದುವು ಆ ಮಾತುಗಳು.

ಅಷ್ಟು ಹೊತ್ತೂ ಮುಂದೆ ಬಾಗಿದ್ದ ತಂದೆ ಒರಗು ಬೆಂಚಿಗೊರಗಿ ನೇರವಾಗಿ ಕುಳಿತರು. ಹಾಗೆ ಕುಳಿತು ಅವರು ಮಗಳ ಮುಖ ನೋಡಿದರು. ಎಷ್ಟೊಂದು ನಿರ್ಮಲವಾಗಿತ್ತು, ನಿಷ್ಕವಟವಾಗಿತ್ತು ಆ ಮುಖ ಮುದ್ರೆ ! ಕಣ್ಣುಗಳು ಮಿನುಗುತಿದ್ದುವಲ್ಲವೆ ? ನಿನ್ನೆಯ ತನಕ ನಡೆದುದೆಲ್ಲವೂ ಬರಿಯ ಕನಸಾಗಿ ಇಂದಿನದೊಂದೇ ನಿಜವಾಗುವುದು ಸಾಧ್ಯವಾದರೆ !

“ಆಗಲಿ ಹಾಗಾದರೆ ಮಗಳಿಗೆ ಕಾಗದ ಬರೀತಾ ಇರಿ, ಆಕೇನೂ ಬರೀತಾಳೆ.”

.... ತಾವಿನ್ನು ಹೊರಡಬೇಕು ಹೊತ್ತಾಯಿತೆನ್ನುವ ಸೂಚ್ಯ ಸೂಚನೆ ಆ ಮಾತು.

ತುಂಗಮ್ಮನ ತಂದೆ ಎದ್ದರು ಸರಸಮ್ಮನೂ ಕುಳಿತಲ್ಲಿಂದ ಎದ್ದರು. ತನಗರಿಯದಂತೆಯೇ ತುಂಗಮ್ಮ ತಂದೆಯ ಬಳಿಗೆ ಬಂದು ನಿಂತಳು. “ಸರಸಮ್ಮನವರೆ--"

ಅದು ತಂದೆಯ ಧ್ವನಿ. ಒಮ್ಮೆಲೆ, ಹೆಸರು ಹಿಡಿದು ಅವರು ಸಂಬೋ ಧಿಸಿದ್ದರು.