ಆದರೆ ಜಲಜ, ತನ್ನ ತುಂಗಕ್ಕನ ಆತ್ಮೀಯರನ್ನು ಕುರಿತು ಹಲವಾರು
ಪ್ರಶ್ನೆಗಳನ್ನು ಕೇಳುತ್ತ, ಆ ಶೂನ್ಯವನ್ನು ಮಧುರವಾದ ನೆನಪುಗಳಿಂದ
ತುಂಬಿದಳು.
“ನಿನ್ನ ತಮ್ಮ ನಿನ್ನ ಹಾಗೇ ಇದಾನೆ ತುಂಗಕ್ಕ ”
“ಹೌದಾ?”
“ಅದೇ ಮೂಗು, ಬಾಯಿ, ಕಣ್ಣು. ಎಲ್ಲಾ ನಿನ್ನದೇ ಪ್ರತಿ.”
“ಹೋಗಮ್ಮ, ಬರೇ ತಮಾಷೆ ನಿನ್ನದು.”
“ಆವನೇನ ತುಂಗಕ್ಕೆ ಚಂದಮಾಮ ಓದೋನು ?”
“ಹೂಂ ಅಬ್ಬ! ಯಾವ ಹೇಳಿದ್ದ ನೆನಪಿಳ್ಕೊಂಬಿಟ್ಟಿದೀಯಲ್ಲೆ!”
“ಮರೆತು ಬಿಡೋಕೆ ನಂಗೇನಾಗಿದ ಧಾಡಿ !"
ತುಂಗಮ್ಮನಿಗೆ, ಮಾತಿಲ್ಲದ ಮೌನವೇ ಹಿತಕರವೆನಿಸಿತು. ಆದರೆ
ಜಲಜ ಬಿಡಬೇಕಲ್ಲವೆ ?
“ಅಕ್ಕ, ನಾನೆಷ್ಟು ಹೆದರ್‍ಕೊಂಡೇಂತ"
“ಯಾಕೆ?"
“ನೀನು, ನಮ್ಮನ್ನ ಬಿಚ್ಚಿಟ್ಟು ಹೊರಟ್ಹೋಗ್ತೀಂತ್ಲೇ ತಿಳಕೊಂಡಿದ್ದೆ.”
“ಅಣ್ಣ ಏನೋ ಬಾ ಹೋಗೋಣ ಅಂದ್ರು.”
---ತನ್ನ ಸಂಸಾರಕ್ಕೆ ತಾನು ಬೇಡವಾದವಳಲ್ಲವೆಂದು ತಿಳಿಸುವತವಕ.
“ಜಲಜ ನೆನವಾಗಿ, ಬರೊಲ್ಲ ಅಂದ್ಬಿಟ್ಟಿಯಾ ಅಕ್ಕ ?”
“ಹೂಂಕಣೇ.”
---ತುಂಗಮ್ಮ ಜಲಜೆಯ ಗಲ್ಲ ತಿವಿದಳು
"ಚಿನ್ನ ನನ್ನಕ್ಕ. ನಂಗೆಲ್ಲಾ ಗೊತ್ತಿದೆ ದೊಡ್ಡಮ್ಮ ಆಗ್ಲೆ ಹೇಳಿದಾರೆ. ಇಲ್ಲಿದ್ರೆ ನಾನು ಹಾಗೆ ತೆಪ್ಪಗೆ ಕೈ ಕಟ್ಟಿಕೊಂಡು ನಿಂತಿರ್‍ತಿದ್ದೇಂತ ಭಾವಿಸಿದ್ಯಾ?"
“ಮತ್ತೇನು ಮಾಡ್ತಿದ್ದೆ ?”
“ವ್ಹಾ ! ಏನು ಮಾಡ್ತಿದ್ದೆ ಅಂತೆ ! ನಿಮ್ಮಪ್ಪನ ಕಾಲು ಹಿಡಿದು ತುಂಗಮ್ಮನ ಬಿಟ್ಟು ಹೋಗೀಂತ ಅ೦ತಿದ್ದೆ.”
“ಹುಚ್ಚಿ!"
ಪುಟ:Abhaya.pdf/೧೯೯
ನ್ಯಾವಿಗೇಷನ್‌ಗೆ ಹೋಗು
ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ
೧೯೪
ಅಭಯ
